ಮುಂಬೈ: ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ 62 ವರ್ಷದ ಭಿಕ್ಷುಕನೋರ್ವ ಸಾವನ್ನಪ್ಪಿದ್ದು, ಆತನ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿರುವ ಪೊಲೀಸರಿಗೆ ಶಾಕ್ ಆಗಿದೆ.
ಮೃತಪಟ್ಟ ಭಿಕ್ಷುಕನ ಮನೆ ಶೋಧ ವೇಳೆ ಪೊಲೀಸರಿಗೆ ಶಾಕ್... ಬ್ಯಾಂಕ್ ಖಾತೆಯಲ್ಲಿ ಲಕ್ಷ ಲಕ್ಷ ಹಣ!
ಕೆಲವು ಭಿಕ್ಷುಕರು ಹೆಸರಿಗಷ್ಟೇ ಭಿಕ್ಷುಕರಾಗಿರುತ್ತಾರೆ. ಅಸಲಿಗೆ ಅವರ ಬಳಿ ಲಕ್ಷಾಂತರ ರೂಪಾಯಿ ಹಣ ಇರುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.
ಮನೆಯಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಬಿರ್ಜು ಚಂದ್ರ ಅಜಾದ್ ಮುಂಬೈನ ಗೋವಂದಿ ಪ್ರದೇಶದ ಸ್ಲಂ ನಿವಾಸಿಯಾಗಿದ್ದು, ನಿನ್ನೆ ರೈಲ್ವೆ ಹಳಿ ದಾಟುತ್ತಿದ್ದಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಈತನ ಮನೆಯಲ್ಲಿ ಪೊಲೀಸರು ಶೋಧ ನಡೆಸಿದಾಗ ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ದೊರೆತಿವೆ. ಅಲ್ಲದೆ ವಿವಿಧ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದ ಎಂದು ತಿಳಿದು ಬಂದಿದೆ. ಮನೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಬಕೆಟ್‌ಗಳಲ್ಲಿ, ಪಾತ್ರೆಗಳಲ್ಲಿ, ಬ್ಯಾಗ್ಗಳಲ್ಲಿ ಹಣ ನೋಡಿರುವ ಪೊಲೀಸರು ಒಂದು ಕ್ಷಣ ಶಾಕ್ಗೊಳಗಾಗಿದ್ದಾರೆ.
ಇನ್ನು ಬ್ಯಾಂಕ್ನಲ್ಲಿ ಠೇವಣಿ ರೂಪದಲ್ಲಿ ಬರೋಬ್ಬರಿ 8.77 ಲಕ್ಷ ರೂ. ಹಾಗೂ ಮನೆಯಲ್ಲೇ 1.5 ಲಕ್ಷ ರೂ. ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮನೆಯಲ್ಲಿದ್ದ ಚಿಲ್ಲರೆ ಹಣ ಬರೋಬ್ಬರಿ 8 ಗಂಟೆಗಳ ಕಾಲ ಎಣಿಕೆ ಮಾಡಿದ್ದಾರೆ. ಸದ್ಯ ಭಿಕ್ಷುಕನ ಸಂಬಂಧಿಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಭಿಕ್ಷುಕರು ಹೆಸರಿಗಷ್ಟೇ ಭಿಕ್ಷುಕರಾಗಿರುತ್ತಾರೆ. ಅಸಲಿಗೆ ಅವರ ಬಳಿ ಲಕ್ಷಾಂತರ ರೂ. ಹಣ ಇರುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ.