ಕರ್ನಾಟಕ

karnataka

By

Published : Mar 6, 2020, 9:52 AM IST

ETV Bharat / bharat

ಆರ್ಥಿಕ ಸಂಕಷ್ಟದಲ್ಲಿ ಯೆಸ್​​ ಬ್ಯಾಂಕ್​​... ಎಟಿಎಂಗಳ ಮುಂದೆ 'ನೋ ಮನಿ' ಬೋರ್ಡ್​!

ಆರ್ಥಿಕ ಸಂಕಷ್ಟದಿಂದ ಒದ್ದಾಡುತ್ತಿರುವ ಯೆಸ್​ ಬ್ಯಾಂಕ್​ನ ಆಡಳಿತವನ್ನ ಈಗಾಗಲೇ ಆರ್​ಬಿಐ ತನ್ನ ಕೈಗೆ ತೆಗೆದುಕೊಂಡಿದ್ದು, ಗ್ರಾಹಕರಿಗೆ ಶಾಕ್​ ನೀಡಿದೆ.

Yes Bank ATM
Yes Bank ATM

ನವದೆಹಲಿ:ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಖಾಸಗಿ ರಂಗದ ಯೆಸ್​ ಬ್ಯಾಂಕ್ ಗ್ರಾಹಕರಿಗೆ ದಿಢೀರ್​ ಶಾಕ್​ ನೀಡಿದ್ದು, ಇನ್ಮುಂದೆ ಈ ಬ್ಯಾಂಕ್​​ನಲ್ಲಿ ಖಾತೆ ಹೊಂದಿರುವ ಗ್ರಾಹಕರು 50 ಸಾವಿರಕ್ಕಿಂತಲೂ ಅಧಿಕ ಹಣ ವಿತ್​ ಡ್ರಾ ಮಾಡದಂತೆ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ನಿರ್ಬಂಧ ಹೇರಿದೆ.

ಆರ್ಥಿಕ ಸಂಕಷ್ಟದಲ್ಲಿ ಯೆಸ್​​ ಬ್ಯಾಂಕ್

ಬ್ಯಾಂಕ್​ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಂತೆ ಬ್ಯಾಂಕ್​ನ ಆಡಳಿತವನ್ನ ತನ್ನ ಕೈಗೆ ತೆಗೆದುಕೊಂಡಿರುವ ರಿಸರ್ವ್​​ ಬ್ಯಾಂಕ್​ ಆಫ್​ ಇಂಡಿಯಾ ಹಣದಿಂದ ಹಣ ವಾಪಸ್​ ಪಡೆಯಲು ಕೆಲ ನಿಬಂಧನೆ ಹೇರಿದ್ದು, ಇದರಿಂದ ಗ್ರಾಹಕರು ಯೆಸ್​ ಬ್ಯಾಂಕ್​ ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಹಣ ವಿತ್​ ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಯೆಸ್​ ಬ್ಯಾಂಕ್​ ಎಟಿಎಂಗಳ ಮುಂದೆ ’ನೋ ಮನಿ’ ಎಂಬ ಬೋರ್ಡ್​ಗಳು ರಾರಾಜಿಸುತ್ತಿವೆ.

ಬ್ಯಾಂಕ್​ನ ಆರ್ಥಿಕ ಸ್ಥಿತಿ ಗಂಭೀರವಾಗಿ ಕುಸಿದಿರುವ ಕಾರಣ ಈಗಾಗಲೇ ಆಡಳಿತ ಮಂಡಳಿ ವಜಾಗೊಳಿಸಲು ಆರ್​ಬಿಐ ಕ್ರಮ ಕೈಗೊಂಡಿದೆ. ಇದರ ಜತೆಗೆ ಯೆಸ್​ ಬ್ಯಾಂಕ್​​ನ ಎಲ್ಲ ಕಾರ್ಯ ಚಟುವಟಿಕೆಗಳ ಮೇಲೆ ಆರ್​ಬಿಐ ತಡೆಯಾಜ್ಞೆ ನೀಡಿದ್ದು, 2020ರ ಏಪ್ರಿಲ್‌ 3ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಇನ್ನು ಆನ್​ಲೈನ್​ ಮೂಲಕ ವ್ಯವಹಾರ ನಡೆಸುತ್ತಿರುವ ಯೆಸ್​ ಬ್ಯಾಂಕ್​ನ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದು, ಸೈಟ್​ ಓಪನ್​ ಆಗುತ್ತಿಲ್ಲ.

ABOUT THE AUTHOR

...view details