ಕರ್ನಾಟಕ

karnataka

ETV Bharat / bharat

67 ಬಿಲಿಯನ್​​​​​​​​ ಒಡೆಯ ಈಗ ಏಷ್ಯಾದ ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿ: ಯಾರವರು? - ಹುರುನ್ ಗ್ಲೋಬಲ್ ರಿಚ್ ಲಿಸ್ಟ್

ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2020ರ ಪ್ರಕಾರ, 67 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್​ಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿ ಎಂದು ತಿಳಿದು ಬಂದಿದೆ.

Mukesh Ambani is the richest Asian
ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ

By

Published : Feb 29, 2020, 3:44 PM IST

ಹೈದರಾಬಾದ್: ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2020ರ ಪ್ರಕಾರ, 67 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್​ಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿ ಎಂದು ತಿಳಿದುಬಂದಿದೆ.

ಟೆಲಿಕಾಂ ವ್ಯವಹಾರದಲ್ಲಿ ಉತ್ತಮ ಸಾಧನೆ ಹಿನ್ನೆಲೆ ಅಂಬಾನಿಯ ಸಂಪತ್ತು ಹೆಚ್ಚಾಗಿದ್ದು, ಟಾಪ್ 10 ಶ್ರೀಮಂತರ ಲಿಸ್ಟ್​ನಲ್ಲಿರುವ ಏಕೈಕ ಏಷ್ಯನ್ ವ್ಯಕ್ತಿ ಎಂದು ಹುರುನ್ ರಿಚ್ ಲಿಸ್ಟ್ ತಿಳಿಸಿದೆ.

62ರ ಹರೆಯದ ಅಂಬಾನಿ 13 ಶತಕೋಟಿ ಡಾಲರ್ ಅಥವಾ 24 ಪ್ರತಿಶತದಷ್ಟು ಸಂಪತ್ತಿನಲ್ಲಿ ಏರಿಕೆ ಕಂಡು 67 ಬಿಲಿಯನ್ ಡಾಲರ್‌ ಒಡೆಯನಾಗಿ ಹೊರಹೊಮ್ಮಿದ್ದು, ಎರಡನೇ ಬಾರಿಗೆ ಅಗ್ರ 10 ರಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ರಿಲಯನ್ಸ್ ಜಿಯೋ, ರಿಲಯನ್ಸ್ ರಿಟೇಲ್, ರಿಫೈನಿಂಗ್ ಮತ್ತು ಪೆಟ್ರೋಕೆಮಿಕಲ್ಸ್ ಗಳಂತಹ ಕಂಪನಿಗಳನ್ನ ಹೊಂದಿರುವ ಇವರು ರಿಲಯನ್ಸ್ ಇಂಡಸ್ಟ್ರೀಸ್ ಪುನರ್​ ರಚಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಸಂಸ್ಥೆ 18 ತಿಂಗಳಲ್ಲಿ ಶೂನ್ಯ ನಿವ್ವಳ ಸಾಲ ಕಂಪನಿಯಾಗಲು ಉದ್ದೇಶಿಸಿದೆ. ಸೌದಿ ಅರಾಮ್ಕೋ ಗೆ ಶೇಕಡಾ 20 ರಷ್ಟು 'ತೈಲದಿಂದ ರಾಸಾಯನಿಕ' ವ್ಯವಹಾರವನ್ನು 75 ಬಿಲಿಯನ್ ಉದ್ಯಮ ಮೌಲ್ಯಕ್ಕೆ ಮಾರಾಟ ಮಾಡಲು ಚರ್ಚಿಸುತ್ತಿದೆ. ಆರ್‌ಐಎಲ್ 10 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಮೈಲಿಗಲ್ಲು ಮುಟ್ಟಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಳೆದ ವರ್ಷಕ್ಕಿಂತಲೂ ದೇಶದಲ್ಲಿ 33 ಶತಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಳವಾಗಿದ್ದು, 137 ಶತಕೋಟ್ಯಧಿಪತಿಗಳೊಂದಿಗೆ ಭಾರತ 3 ನೇ ಸ್ಥಾನಕ್ಕೆ ಏರಿದೆ. ಮುಂಬೈ 50 ದೊಡ್ಡ ಶ್ರೀಮಂತರನ್ನ ಹೊಂದಿರುವ ರಾಜಧಾನಿಯಾಗಿದ್ದು, 30 ಶ್ರೀಮಂತರನ್ನ ಹೊಂದಿರುವ ನವದೆಹಲಿ ಎರಡನೇ ಸ್ಥಾನದಲ್ಲಿದೆ. ಒಟ್ಟು 169 ಭಾರತೀಯ ಬಿಲಿಯನೇರ್‌ಗಳಿದ್ದು, ಅವರಲ್ಲಿ 32 ಮಂದಿ ಭಾರತದ ಹೊರಗೆ ನೆಲೆಸಿದ್ದಾರೆ.

ABOUT THE AUTHOR

...view details