ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ, ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಮುಕೇಶ್ ಅಂಬಾನಿ ಅವರು ಅಜ್ಜನಾದ ಸಂಭ್ರಮದಲ್ಲಿದ್ದಾರೆ.
Photo: ಅಜ್ಜನಾದ ಸಂಭ್ರಮದಲ್ಲಿ ಮುಕೇಶ್ ಅಂಬಾನಿ - ಮುಕೇಶ್ ಅಂಬಾನಿ ಮೊಮ್ಮಗ
ಮೊಮ್ಮೊಗನೊಂದಿಗೆ ಮುಕೇಶ್ ಅಂಬಾನಿ ಮೊದಲ ಫೋಟೋ ಹಂಚಿಕೊಂಡಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಜ್ಜನಾದ ಸಂಭ್ರಮದಲ್ಲಿ ಮುಕೇಶ್ ಅಂಬಾನಿ
ಮುಕೇಶ್-ನೀತಾ ಅಂಬಾನಿಯವರ ಮಗ ಆಕಾಶ್ ಅಂಬಾನಿ ಅವರ ಪತ್ನಿ ಶ್ಲೋಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಆಗಮನವು ಮೆಹ್ತಾ ಮತ್ತು ಅಂಬಾನಿ ಕುಟುಂಬಗಳ ಖುಷಿ ಹೆಚ್ಚಿಸಿದೆ. ತಾಯಿ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ನಿನ್ನೆ ತಿಳಿಸಿದ್ದವು.
2019ರ ಮಾರ್ಚ್ ತಿಂಗಳಲ್ಲಿ ಆಕಾಶ್-ಶ್ಲೋಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.