ಮುಜಾಫರ್ಪುರ: ಮೌಢ್ಯತೆ, ಮಾಟಮಂತ್ರದ ಹೆಸರಿನಲ್ಲಿ ಮೂವರು ಮಹಿಳೆಯರ ತಲೆಕೂದಲನ್ನು ಬೋಳಿಸಿರುವ ಅಮಾನವೀಯ ಘಟನೆ ಬಿಹಾರ್ನ ಮುಜಾಫರ್ಪುರದಲ್ಲಿ ಬೆಳಕಿಗೆ ಬಂದಿದೆ.
ಮೂವರು ಮಹಿಳೆಯರ ತಲೆಬೋಳಿಸಿ ಚಿತ್ರಹಿಂಸೆ ಮುಜಾಫರ್ಪುರ ಜಿಲ್ಲೆಯ ಹಮ್ಮರಿ ಪೊಲೀಸ್ ಠಾಣೆ ವ್ಯಾಪ್ತಿಯ ಡಕ್ರಮಾ ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿದ್ದು, ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ.
ಹಳ್ಳಿಯ ಕೆಲವರ ಪ್ರಾಬಲ್ಯದಿಂದ ಗ್ರಾಮದ ಮೂವರು ಮಹಿಳೆಯರಿಗೆ ಮಾಟಗಾತಿಯೊಬ್ಬಳು ತಲೆಕೂದಲನ್ನು ಸಂಪೂರ್ಣವಾಗಿ ಬೋಳಿಸಿದ್ದಾಳೆ. ಅಲ್ಲದೇ ಈ ಮಹಿಳೆಯರನ್ನು ಹೊಡೆದು, ಬಡಿದು ಹಿಂಸೆ ಕೊಡಲಾಗಿದೆ ಎಂದು ತಿಳಿದು ಬಂದಿದೆ.
ಈ ವಿಷಯ ಬೆಳಕಿಗೆ ಬಂದ ನಂತರ ಮುಜಾಫರ್ಪುರ ಜಿಲ್ಲಾಡಳಿತ ಮತ್ತು ಹಮ್ಮರಿ ಪೊಲೀಸ್ ಠಾಣೆ ಎಚ್ಚೆತ್ತುಕೊಂಡು ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿದೆ. ಪ್ರಕರಣ ಸಂಬಂಧ 12 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.