ನವದೆಹಲಿ: ಭಾರತವನ್ನು ಮತ್ತಷ್ಟು ತಲ್ಲಣಗೊಳಿಸಲು ಕಾರಣವಾಗಿದ್ದು ನಿಜಾಮುದ್ಧೀನ್ನಲ್ಲಿ ನಡೆದ ಧಾರ್ಮಿಕ ಸಭೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಆಯಾ ರಾಜ್ಯಗಳಿಗೆ ತೆರಳಿದ ಮುಸ್ಲಿಮರಲ್ಲಿ 150ಕ್ಕೂ ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇನ್ನೂ ಹಲವಾರು ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
ಲಾಕ್ಡೌನ್ ಆದೇಶ ಉಲ್ಲಂಘಿಸಿ ಸಭೆ ನಡೆಸಿದ ತಬ್ಲಿಘಿ ಜಮಾತ್ ಮುಖ್ಯಸ್ಥ ಮೊಹಮ್ಮದ್ ಸಾದ್ ಕಂಧಲ್ವಿ ಮತ್ತು ಇತರ ಆರು ಜನರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈಗ ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೀಗಾಗಿ ಕಂಧಲ್ವಿ ಪರಾರಿಯಾಗಿದ್ದಾನೆ ಎಂಬ ವರದಿಗಳು ಬಿತ್ತರವಾಗುತ್ತಿವೆ.