ಧೋನಿ ವಿದಾಯ ನಿರ್ಧಾರಕ್ಕೆ ಟ್ಟೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಚಿನ್ ತೆಂಡೂಲ್ಕರ್, 'ಭಾರತೀಯ ಕ್ರಿಕೆಟ್‌ಗೆ ನಿಮ್ಮ ಕೊಡುಗೆ ಅಪಾರವಾಗಿದೆ. ನಾವಿಬ್ಬರೂ ಒಟ್ಟಿಗೆ 2011ರ ವಿಶ್ವಕಪ್ ಗೆದ್ದಿರುವುದು ನನ್ನ ಜೀವನದ ಅತ್ಯುತ್ತಮ ಕ್ಷಣ. ನಿಮ್ಮ 2 ನೇ ಇನ್ನಿಂಗ್ಸ್‌ಗೆ ಶುಭ ಹಾರೈಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.
ಕ್ರಿಕೆಟಿಗ ಅಶ್ವಿನ್, ದೇಶಕ್ಕಾಗಿ ನೀವು ಎಲ್ಲವನ್ನೂ ನೀಡಿದ್ದೀರಿ. 2011 ರ ವಿಶ್ವಕಪ್ ಮತ್ತು ಅದ್ಭುತವಾದ ಚೆನ್ನೈ ಐಪಿಎಲ್ ವಿಜಯಗಳು ಯಾವಾಗಲೂ ನನ್ನ ನೆನಪಿನಲ್ಲಿ ಉಳಿಯುತ್ತವೆ. ನಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭವಾಗಲಿ' ಎಂದಿದ್ದಾರೆ.
ಧೋನಿ ಮತ್ತು ರೈನಾ ನಿವೃತ್ತಿಗೆ ನಟ ಮೋಹನ್ ಲಾಲ್ ವಿಶೇಷ ರೀತಿಯ ಬೀಳ್ಕೊಡುಗೆ ನೀಡಿದ್ದಾರೆ.
ಕೊಲ್ಕತ್ತಾ ನೈಟ್ರೈಡರ್ಸ್ ತಂಡ, ಸುರೇಶ್ ರೈನಾ, ಎಂ.ಎಸ್.ಧೋನಿ ನಿರ್ಧಾರಕ್ಕೆ ಟ್ಟೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ಧೋನಿ ನಾಯಕನಾಗಿ ತಂಡ ಮುನ್ನುಗ್ಗಿಸಿದ ಪರಿಯನ್ನು ಸ್ಮರಿಸಿದೆ.
'ಧೋನಿಯನ್ನು ಹಿಂಬಾಲಿಸಿದ ರೈನಾ' ಎಂದು ಐಸಿಸಿ ಟ್ವೀಟ್ ಮಾಡಿದೆ.
ಇದು ಒಂದು ಯುಗದ ಅಂತ್ಯ. ದೇಶ ಮತ್ತು ವಿಶ್ವ ಕ್ರಿಕೆಟ್‌ನ ಅದ್ಭುತ ಆಟಗಾರ. ಅವರ ನಾಯಕತ್ವ ಗುಣಗಳಿಗೆ ಹೋಲಿಕೆ ಸಾಧ್ಯವೇ ಇಲ್ಲ. ಧೋನಿ ಆಟದ ಪರಿಗೆ ಸಮಾನರನ್ನು ಹೋಲಿಸುವುದು ಕಷ್ಟ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಟ್ಟೀಟ್ ಮಾಡಿ, ಧೋನಿಯ ಅದ್ಭುತ 'ಸ್ಟಂಪಿಂಗ್' ಅನ್ನು ಸ್ಮರಿಸಿದ್ದಾರೆ. ಭಾರತೀಯ ಮತ್ತು ವಿಶ್ವ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಕ್ಯಾಪ್ಟನ್ ಕೂಲ್ ಯಾವಾಗಲೂ ನಾಟ್ ಔಟ್ ಎಂದಿದ್ದಾರೆ.