ಕರ್ನಾಟಕ

karnataka

ETV Bharat / bharat

ಅಂತರ್ಜಾತಿ ವಿವಾಹಕ್ಕೆ ಗ್ರಾಮಸ್ಥರು ನೀಡಿದ ಶಿಕ್ಷೆ ಇದು..! - ಮಧ್ಯಪ್ರದೇಶ

ಯುವತಿಯೋರ್ವಳು ಬೇರೆ ಜಾತಿಯ ಹುಡುಗನನ್ನು ವರಿಸಿದ ಕಾರಣಕ್ಕೆ ಆತನನ್ನು ಹೆಗಲ ಮೇಲೆ ಹೊತ್ತು ಸಾಗುವ ಶಿಕ್ಷೆ ನೀಡಲಾಗಿದೆ.

ಶಿಕ್ಷೆ

By

Published : Apr 14, 2019, 7:48 AM IST

ಜಬುವಾ(ಮಧ್ಯಪ್ರದೇಶ):ಜಾತಿ ವ್ಯವಸ್ಥೆ ಹಳ್ಳಿಗಳಲ್ಲಿ ಇನ್ನೂ ಗಟ್ಟಿಯಾಗಿ ಬೇರೂರಿದೆ ಎನ್ನುವುದಕ್ಕೆ ಮಧ್ಯಪ್ರದೇಶ ರಾಜ್ಯದ ಜಬುವಾ ಜಿಲ್ಲೆಯ ದೇವಿಗಢ ಗ್ರಾಮದಲ್ಲಿ ನಡೆದ ಘಟನೆಯೇ ಸಾಕ್ಷಿ.

ಇಲ್ಲಿನ ಯುವತಿಯೋರ್ವಳು ಬೇರೆ ಜಾತಿಯ ಹುಡುಗನನ್ನು ವರಿಸಿದ ಕಾರಣಕ್ಕೆ ಆತನನ್ನು ಹೆಗಲ ಮೇಲೆ ಹೊತ್ತು ಸಾಗುವ ಶಿಕ್ಷೆ ನೀಡಲಾಗಿದೆ.

ಹುಡುಗನನ್ನು ಹೊತ್ತು ಸಾಗುವ ವೇಳೆ ಸುಸ್ತಾಗಿ ಆಕೆ ನಿಂತ ವೇಳೆ ಗ್ರಾಮಸ್ಥರು ಬೊಬ್ಬೆ ಹೊಡೆಯುತ್ತಾ ಆಕೆಗೆ ಮಾನಸಿಕವಾಗಿ ಹಿಂಸೆ ನೀಡುವ ಪ್ರಯತ್ನ ಮಾಡಿದ್ದಾರೆ.

ಸದ್ಯ ಈ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಬುವಾ ಎಸ್ಪಿ ವಿನೀತ್ ಜೈನ್ ಹೇಳಿದ್ದಾರೆ.

ABOUT THE AUTHOR

...view details