ಭೋಪಾಲ್ (ಮಧ್ಯಪ್ರದೇಶ): ಸರ್ಕಾರಿ ನೌಕರ ಪೋಷಕರ ಮರಣದ ನಂತರ ಅವರ ಅವಿವಾಹಿತ ಮಗಳಿಗೆ ಕುಟುಂಬ ಪಿಂಚಣಿ ನೀಡಲು ರಾಜ್ಯ ಸರ್ಕಾರ ತಯಾರಿ ನಡೆಸುತ್ತಿದೆ.
ಇಲ್ಲಿಯವರೆಗೆ, ಕುಟುಂಬ ಪಿಂಚಣಿಯನ್ನು 18 ವರ್ಷದ ಪುತ್ರ ಮತ್ತು 25 ವರ್ಷದೊಳಗಿನ ಪುತ್ರಿಯರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರ 25 ವರ್ಷ ಮೇಲ್ಪಟ್ಟ ಅವಿವಾಹಿತ ಹೆಣ್ಣು ಮಕ್ಕಳಿಗೂ ಪಿಂಚಣಿ ಕೊಡಲು ನಿರ್ಧರಿಸಿದೆ. ಈ ಪ್ರಸ್ತಾಪಕ್ಕೆ ಹಣಕಾಸು ಇಲಾಖೆ ಈಗಾಗಲೇ ಸಮ್ಮತಿಸಿದ್ದು, ಮುಖ್ಯಮಂತ್ರಿಗಳ ಸಚಿವಾಲಯವು ಅದರ ಪರೀಕ್ಷೆಗೆ ಸಾಮಾನ್ಯ ಆಡಳಿತ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದೆ. ಕೇಂದ್ರ ಸರ್ಕಾರ ಏಪ್ರಿಲ್ 28, 2011 ರಂದು ಪಿಂಚಣಿ ನಿಯಮಗಳನ್ನು ಪರಿಷ್ಕರಿಸಿದೆ.
ಈ ಪ್ರಸ್ತಾವನೆಯ ಮೇರೆಗೆ 2020 ರ ಮಾರ್ಚ್ 13 ರಂದು ನಡೆದ ಕುಟುಂಬ ಪಿಂಚಣಿ ಕಲ್ಯಾಣ ಮಂಡಳಿಯ ಸಭೆಯಲ್ಲಿ ಹಣಕಾಸು ಇಲಾಖೆ ತನ್ನ ತಾತ್ವಿಕ ಒಪ್ಪಿಗೆ ನೀಡಿದೆ. ಹೆಣ್ಣುಮಕ್ಕಳಿಗೆ ಕುಟುಂಬ ಪಿಂಚಣಿಯ ಲಾಭ ಪಡೆಯಲು ಮುಖ್ಯಮಂತ್ರಿಗಳ ಸಚಿವಾಲಯವು ಸಾಮಾನ್ಯ ಆಡಳಿತ ಇಲಾಖೆಗೆ ಕಳುಹಿಸಿದೆ.