ಕರ್ನಾಟಕ

karnataka

ETV Bharat / bharat

ಪ್ರಯಾಣಿಕರೊಂದಿಗೆ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ವಾಗ್ವಾದ.. ವಿಡಿಯೋ ವೈರಲ್! - ಪ್ರಯಾಣಿಕರೊಂದಿಗೆ ಸಾಧ್ವಿ ಪ್ರಜ್ಞಾ ಸಿಂಗ್ ವಾದ

ಸ್ಪೈಸ್​ ಜೆಟ್​ ವಿಮಾನದಲ್ಲಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಪ್ರಯಾಣಿಕರೊಂದಿಗೆ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ವಾಗ್ವಾದ, sadhvi pragya thakur clashed with passengers in flight
ಪ್ರಯಾಣಿಕರೊಂದಿಗೆ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ವಾಗ್ವಾದ

By

Published : Dec 23, 2019, 12:52 PM IST

ಭೋಪಾಲ್(ಮಧ್ಯಪ್ರದೇಶ):ದೆಹಲಿಯಿಂದ ಭೋಪಾಲ್ ವಿಮಾನದ ಸೀಟ್​ ಬುಕ್​ ಮಾಡಿದ್ದ ತಮಗೆ ಕಾಯ್ದಿರಿಸಿದ್ದ ಸೀಟ್​ ನೀಡಲಿಲ್ಲವೆಂದು ಆರೋಪಿಸಿ ದೂರು ನೀಡಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್, ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿರುವ ವಿಡಿಯೋ ವೈರಲ್ ಆಗಿದೆ.

2 ದಿನಗಳ ಹಿಂದೆ ನವದೆಹಲಿಯಿಂದ ಭೋಪಾಲ್​ಗೆ ಎಸ್‌ಜಿ 2489 ವಿಮಾನದಲ್ಲಿ ಟಿಕೆಟ್ ಬುಕ್​ ಮಾಡಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ತಾವು ಬುಕ್ ಮಾಡಿದ್ದ ಸೀಟ್​ ನೀಡಲಿಲ್ಲವೆಂದು ವಿಮಾನ ಸಿಬ್ಬಂದಿಯನ್ನ ತರಾಟೆಗೆ ತಗೆದುಕೊಂಡಿದ್ದಾರೆ. ಈ ವೇಳೆ ವಿಮಾನ ಹೊರಡುವುದೂ ಕೂಡ ತಡವಾಗಿದೆ.

ಪ್ರಯಾಣಿಕರೊಂದಿಗೆ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ವಾಗ್ವಾದ

ಸಂಸದೆ, ಸಿಬ್ಬಂದಿಯೊಂದಿಗೆ ವಾದ ಮಾಡುತ್ತಿರುವುದರಿಂದ ವಿಮಾನ ಹೊರಡುವುದು ತಡವಾಯಿತೆಂದು ಪ್ರಯಾಣಿಕರು ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಒಬ್ಬ ಜನಪ್ರತಿನಿಧಿಯಾಗಿದ್ದೀರ. ಜನರಿಗೆ ತೊಂದರೆ ಕೊಡುವುದು ನಿಮ್ಮ ಕೆಲಸವಲ್ಲ. ಬೇಕಾದರೆ ಈ ವಿಮಾನದಿಂದ ಇಳಿದು ಮುಂದಿನ ವಿಮಾನದಲ್ಲಿ ಬನ್ನಿ ಎಂದು ಪ್ರಯಾಣಿಕರೊಬ್ಬರು ಸಾಧ್ವಿ ಪ್ರಜ್ಞಾ ಸಿಂಗ್ ಅವರಿಗೆ ಹೇಳಿದ್ದಾರೆ.

ಘಟನೆ ನಂತರ ಪ್ರಜ್ಞಾ ಠಾಕೂರ್ ರಾಜ ಭೋಜ್ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, ಪ್ರಯಾಣಿಕರೊಂದಿಗೆ ವಿಮಾನ ಸಿಬ್ಬಂದಿ ಸರಿಯಾಗಿ ವರ್ತಿಸುವುದಿಲ್ಲ. ನಾನು ಕಾಯ್ದಿರಿಸಿದ್ದ ಸೀಟ್​ನ್ನು ನನಗೆ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ABOUT THE AUTHOR

...view details