ಭೋಪಾಲ್: ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸಧ್ಯ ಮತ್ತೊಂದು ವಿವಾದಿತ ಹೇಳಿಕೆ ನೀಡಿ, ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಿಜೆಪಿ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ದಿವಂಗತ ಅರುಣ್ ಜೇಟ್ಲಿ, ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಈ ಹಿಂದೆ ನಮ್ಮ ಮಹಾಗುರುಗಳು ನನಗೆ ಹೇಳಿದ್ದರು. ಬಿಜೆಪಿಗೆ ಕೆಟ್ಟ ಕಾಲವಿದೆ. ವಿಪಕ್ಷಗಳು ನಮ್ಮ ವಿರುದ್ಧ ಮಂತ್ರ ಶಕ್ತಿ(ಮಾರಕ ಶಕ್ತಿ) ಬಳಸಿಕೊಂಡು ಸೇಡು ತೀರಿಸಿಕೊಳ್ಳಲು ಮುಂದಾಗಲಿವೆ ಎಂದು. ಆದರೆ ನಾನು ಆ ಮಾತನ್ನು ಮರೆತಿದ್ದೆ. ಇದೀಗ ನಮ್ಮ ಹಿರಿಯ ಪ್ರಮುಖ ಮುಂಖಡರೆಲ್ಲರೂ ನಿಧನರಾಗುತ್ತಿರುವುದನ್ನ ನೋಡಿದರೆ ಅವರು ಅಂದು ಹೇಳಿರುವ ಮಾತು ಇದೀಗ ನಿಜ ಅನ್ನಿಸುತ್ತಿದೆ ಎಂದಿದ್ದಾರೆ.