ಭೋಪಾಲ್: ಬಿಜೆಪಿ ಶಾಸಕರ ವಿಶ್ವಾಸ ಮತಯಾಚನೆ ಒತ್ತಾಯದ ನಡುವೆಯೂ ಮಧ್ಯಪ್ರದೇಶ ವಿಧಾನಸಭೆ ಅಧಿವೇಶನವನ್ನು ಮಾರ್ಚ್ 26ರ ವರೆಗೆ ಮುಂದೂಡಲಾಗಿದೆ.
ಕೊರೊನಾದಿಂದಾಗಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಕಮಲ್ನಾಥ್ ಸರ್ಕಾರ - ಮಧ್ಯಪ್ರದೇಶ ವಿಧಾನಸಭೆ ಅಧಿವೇಶನ ಮುಂದೂಡಿಕೆ
ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕಮಲ್ ನಾಥ್ ವಿಶ್ವಾಸ ಮತಯಾಚನೆ ನಡೆಸುತ್ತಾರೆ ಎಂದೇ ಎಲ್ಲರು ತಿಳಿದಿದ್ದರು. ಆದರೆ ಕೊರೊನಾ ಸೋಂಕಿನ ಭೀತಿಯಿಂದ ಸದನವನ್ನು ಮಾರ್ಚ್ 26ರ ವರೆಗೆ ಮುಂದೂಡಲಾಗಿದೆ.
![ಕೊರೊನಾದಿಂದಾಗಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಕಮಲ್ನಾಥ್ ಸರ್ಕಾರ MP House adjourned till March 26,ಕೊರೊನಾ ಭೀತಿಯಿಂದ ಸದನ ಮೂಂದೂಡಿಕೆ](https://etvbharatimages.akamaized.net/etvbharat/prod-images/768-512-6425313-thumbnail-3x2-brm.jpg)
ಕೊರೊನಾ ಭೀತಿಯಿಂದ ಸದನ ಮೂಂದೂಡಿಕೆ
ರಾಜ್ಯಪಾಲ ಲಾಲ್ಜಿ ಟಂಡನ್ ಅವರ ಸಂಕ್ಷಿಪ್ತ ಭಾಷಣದ ನಂತರ, ಬಿಜೆಪಿಯ ಶಾಸಕರು ವಿಶ್ವಾಸ ಮತಯಾಚನೆ ಬೇಡಿಕೆಯನ್ನು ಎತ್ತಿದರು. ಇದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು.
ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಗೋವಿಂದ್ ಸಿಂಗ್ ಅವರು ದೇಶದಲ್ಲಿ ಹರಡಿರುವ ಕೊರೊನಾ ವೈರಸ್ ಭೀತಿಯನ್ನು ಪ್ರಸ್ತಾಪಿಸಿ ಕೇಂದ್ರದ ಸಲಹೆಯನ್ನು ಸದನಕ್ಕೆ ತಿಳಿಸಿದರು. ಗೋವಿಂದ್ ಸಿಂಗ್ ಅವರ ಮನವಿಗೆ ಸಮ್ಮತಿಸಿದ ಸ್ಪೀಕರ್ ಸದನವನ್ನು ಮಾರ್ಚ್ 26ರ ವರೆಗೆ ಮುಂದೂಡಿದರು.
Last Updated : Mar 16, 2020, 6:57 PM IST