ಕರ್ನಾಟಕ

karnataka

ETV Bharat / bharat

ಆ್ಯಂಬುಲೆನ್ಸ್​​ನಲ್ಲಿ ರೋಗಿ:  ಪಿಪಿಇ ಕಿಟ್​ನಲ್ಲೇ ಮದ್ಯ ಖರೀದಿಸಲು ವಾಹನ ನಿಲ್ಲಿಸಿದ ಸಿಬ್ಬಂದಿ!

ಪಿಪಿಇ ಕಿಟ್​ ತೊಟ್ಟು ಕೊರೊನಾ ಸೋಂಕಿತ ವ್ಯಕ್ತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ನಡುರಸ್ತೆಯಲ್ಲೇ ಆ್ಯಂಬುಲೆನ್ಸ್​​​​​ ನಿಲ್ಲಿಸಿ ಮದ್ಯ ಖರೀದಿ ಮಾಡಿದ್ದಾರೆ.

Health workers stop ambulance
Health workers stop ambulance

By

Published : Sep 24, 2020, 8:01 PM IST

Updated : Sep 24, 2020, 10:30 PM IST

ಸತಾರಾ(ಮಧ್ಯಪ್ರದೇಶ):ಕೋವಿಡ್​​-19 ಮಾಹಾಮಾರಿ ಹೊಡೆದೋಡಿಸಲು ಕೊರೊನಾ ವಾರಿಯರ್ಸ್​​ ಹಗಲು-ರಾತ್ರಿ ಲೆಕ್ಕ ಹಾಕದೇ ಕೆಲಸ ಮಾಡುತ್ತಿದ್ದಾರೆ. ಇದರ ಮಧ್ಯೆ ಕೆಲ ಆರೋಗ್ಯ ಸಿಬ್ಬಂದಿ ಮಾಡುವ ಎಡವಟ್ಟು ಎಲ್ಲರಿಗೂ ತೊಂದರೆಯಾಗುವಂತೆ ಮಾಡುತ್ತಿದೆ.

ಆ್ಯಂಬುಲೆನ್ಸ್​​ನಲ್ಲಿ ಕೊರೊನಾ ರೋಗಿ

ಮಧ್ಯಪ್ರದೇಶದ ಸತಾರಾದಲ್ಲಿ ಆರೋಗ್ಯ ಸಿಬ್ಬಂದಿ ನಡೆದುಕೊಂಡಿರುವ ರೀತಿಗೆ ಇಡೀ ಆರೋಗ್ಯ ಇಲಾಖೆ ತಲೆತಗ್ಗಿಸುವಂತೆ ಆಗಿದೆ. ಕೊರೊನಾ ಸೋಂಕಿತ ವ್ಯಕ್ತಿಯನ್ನ ಆ್ಯಂಬುಲೆನ್ಸ್​​ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಿಬ್ಬಂದಿ ನಡುರಸ್ತೆಯಲ್ಲಿ ಮದ್ಯದಂಗಡಿ ಮುಂದೆ ವಾಹನ ನಿಲ್ಲಿಸಿ ಮದ್ಯ ಖರೀದಿ ಮಾಡಿರುವ ದೃಶ್ಯ ಕಂಡು ಬಂದಿದೆ.

ಮದ್ಯ ಖರೀದಿ ಮಾಡಲು ಆ್ಯಂಬುಲೆನ್ಸ್​​ ನಿಲ್ಲಿಸಿದ ಆರೋಗ್ಯ ಸಿಬ್ಬಂದಿ

ಸತ್ನಾ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ಇವರಾಗಿದ್ದು, ಪಿಪಿಟಿ ಕಿಟ್​​ ಧರಿಸಿರುವ ಇವರು, ಮದ್ಯ ಖರೀದಿ ಮಾಡಿದ್ದಾರೆ. ಆ್ಯಂಬುಲೆಮ್ಸ್​​​ ನಂಬರ ಎಸ್​​.ಎಂಪಿ 19, ಜಿಎ 4283 ಆಗಿದ್ದು, ಇದರಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಮದ್ಯದಂಗಡಿ ಸಮೀಪದಲ್ಲಿರುವ ಕೆಲವರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Last Updated : Sep 24, 2020, 10:30 PM IST

ABOUT THE AUTHOR

...view details