ಕರ್ನಾಟಕ

karnataka

ETV Bharat / bharat

ಶಾಲೆಗೆ ಹೋಗಲು ನಿತ್ಯ ಪರದಾಟ... ಪ್ರಾಣ ಪಣಕ್ಕಿಟ್ಟು ನದಿ ದಾಟುತ್ತಾರೆ ಇಲ್ಲಿನ ಮಕ್ಕಳು! - ಮಧ್ಯಪ್ರದೇಶ ಸರ್ಕಾರ

ಶಾಲೆಗೆ ಹೋಗಲು ಇಲ್ಲಿನ ಮಕ್ಕಳು ಮುರಿದು ಹೋಗಿರುವ ಸೇತುವೆ ದಾಟಬೇಕಾದ ಅನಿವಾರ್ಯತೆ ಎದುರಾಗಿದ್ದು, ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಶಾಲೆಗೆ ಹೋಗಲು ನಿತ್ಯ ಪರದಾಟ

By

Published : Jul 20, 2019, 4:37 PM IST

ದದ್ರೌಡಿ(ಮಧ್ಯಪ್ರದೇಶ):ಎಲ್ಲರಂತೆ ಶಾಲೆಗೆ ಹೋಗಿ ತಮ್ಮ ಜೀವನ ರೂಪಿಸಿಕೊಳ್ಳಲು ಮುಂದಾಗಿರುವ ನೂರಾರು ಮಕ್ಕಳಿಗೆ ಇಲ್ಲಿನ ಸೇತುವೆವೊಂದು ನಿತ್ಯ ನರಕ ದರ್ಶನ ಮಾಡಿಸುತ್ತಿದೆ. ಸೇತುವೆ ಮುರಿದು ಹೋಗಿ ವರ್ಷಗಳೇ ಕಳೆದಿದ್ದರೂ ಅದರ ಕಡೆ ಮಧ್ಯಪ್ರದೇಶ ಸರ್ಕಾರ ತಲೆ ಹಾಕಿಲ್ಲ.

ಮಧ್ಯಪ್ರದೇಶದ ಉಮರಿಯಾ, ದದ್ರೌಡಿ, ಕೋಡರ್, ಬರ್ತರಾಯ್ ಹಳ್ಳಿಗೆ ಸಂಪರ್ಕ ಮಾರ್ಗವಾಗಿರುವ ಸೇತುವೆವೊಂದು ಮುರಿದು ಹೋಗಿ ವರ್ಷಗಳೇ ಕಳೆದು ಹೋಗಿವೆ. ಇದೇ ಸೇತುವೆ ಮೂಲಕ ನಿತ್ಯ ನೂರಾರು ಮಕ್ಕಳು ಶಾಲೆಗೆ ಹೋಗಬೇಕು. ಸದ್ಯ ಸಂಪರ್ಕ ಇಲ್ಲದ ಕಾರಣ ವಿದ್ಯಾರ್ಥಿಗಳು ಹರಸಾಹಸ ಪಟ್ಟು ನೀರಿನಲ್ಲೇ ತಮ್ಮ ಪ್ರಾಣ ಪಣಕ್ಕಿಟ್ಟು ನದಿ ದಾಟುವಂತಾಗಿದೆ.

ನಿತ್ಯ ಮಕ್ಕಳು, ಸ್ಥಳೀಯರು ನದಿಯನ್ನು ದಾಟಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇಷ್ಟಾದರೂ ಮಧ್ಯಪ್ರದೇಶ ಸರ್ಕಾರ ಅಥವಾ ಸ್ಥಳೀಯ ಅಧಿಕಾರಿ, ರಾಜಕಾರಣಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ಜಾಣ ಕುರುಡು ತೋರಿದ್ದಾರೆ.

ಇನ್ನು ಕೆಲವೊಮ್ಮೆ ಮಳೆ ಜೋರಾಗಿ ಬೀಳುವ ಸಮಯದಲ್ಲಿ ನದಿ ಉಕ್ಕಿ ಹರಿಯುವುದರಿಂದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಸ್ಥಳೀಯ ಗ್ರಾಮದವರೇ ಸೇರಿ ಮಣ್ಣು ಹಾಕಿದರೂ ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗುತ್ತದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸ್ಥಳೀಯ ಅಧಿಕಾರಿ ಉಮೇಶ್​ ಧುರ್ವೆ, ಈಗಾಗಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಆದಷ್ಟು ಬೇಗ ಸೇತುವೆ ಸರಿಪಡಿಸುವುದಾಗಿ ಹೇಳಿಕೆ ನೀಡಿದ್ದಾರೆ.

ABOUT THE AUTHOR

...view details