ಚೆನ್ನೈ:ತಾಯಿಯ ಪ್ರೀತಿ ಮತ್ತು ವಾತ್ಸಲ್ಯದ ಮುಂದೆ ಎಲ್ಲವೂ ಶೂನ್ಯ ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾದ ಸತ್ಯ. ಮನುಷ್ಯರಲ್ಲಿ ಮಾತ್ರವಲ್ಲದೇ ಪ್ರಾಣಿಗಳಲ್ಲೂ ಈ ರೀತಿಯ ಅನೇಕ ಸನ್ನಿವೇಶಗಳು ನಮ್ಮ ಕಣ್ಮುಂದೆ ಕಾಣಸಿಗುತ್ತವೆ. ತಮಿಳುನಾಡಿನ ತಿರುಪ್ಪೂರ್ದಲ್ಲಿ ನಡೆದಿರುವ ಘಟನೆ ಇದಕ್ಕೆ ಜ್ವಲಂತ ಉದಾಹರಣೆ.
ಇದಲ್ಲವೇ ತಾಯಿ ಪ್ರೀತಿ?: ಮಳೆ ನೀರಲ್ಲಿ ಮುಳುಗುತ್ತಿದ್ದ ಮರಿಗಳ ರಕ್ಷಿಸಿದ ತಾಯಿ ಇಲಿ! - tamil nadu
ಹೆತ್ತ ತಾಯಿಯ ಪ್ರೀತಿ ಎಲ್ಲ ದೇವರಗಿಂತಲೂ ಮಿಗಿಲು ಎಂಬ ಮಾತಿದೆ. ಅದು ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳ ಜೀವನದಲ್ಲೂ ಸಾಬೀತಾಗಿದೆ.
ತಮಿಳುನಾಡಿನ ಕೆಲ ಪ್ರದೇಶಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಲ್ಲಿನ ಜನಜೀವನ ವರ್ಷಧಾರೆಯಿಂದಾಗಿ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಇಲಿಯೊಂದು ನೀರಿನಲ್ಲಿ ಸಿಲುಕಿಕೊಂಡಿದ್ದ ತನ್ನ ಮರಿಗಳನ್ನು ತೆಗೆದುಕೊಂಡು ಹೋಗಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾನು ವಾಸವಿದ್ದ ಸ್ಥಳ ಸಂಪೂರ್ಣವಾಗಿ ನೀರಿನಿಂದ ಆವೃತವಾದ ಕಾರಣ ಮರಿಗಳು ಅದರೊಳಗೆ ಸಿಲುಕಿಕೊಂಡಿದ್ದವು. ಈ ವೇಳೆ ತನ್ನ ಮರಿಗಳನ್ನು ಒಂದಾದ ಮೇಲೊಂದರಂತೆ ಬಾಯಿಯಲ್ಲಿ ಹಿಡಿದುಕೊಂಡು ಹೋಗಿ ತಾಯಿ ಬಿಟ್ಟು ಬರುತ್ತಿತ್ತು.