ಕರ್ನಾಟಕ

karnataka

ETV Bharat / bharat

ತಾಯಿ ಸಾವಿನ ಸುದ್ದಿ ಕೇಳಿದ ಮಗ ಇನ್ನಿಲ್ಲ... ಅಮ್ಮನೊಂದಿಗೆ ಪಯಣ ಬೆಳಸಿದ ಪುತ್ರ! - ಖಮ್ಮಂ ತಾಯಿ ಮಗ ಸಾವು ಸುದ್ದಿ

ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಈ ಸುದ್ದಿ ಕೇಳಿದ ಹಿರಿಯ ಮಗ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತಾಯಿ, ಮಗ ಸಾವು

By

Published : Nov 9, 2019, 10:02 AM IST

ಖಮ್ಮಂ( ತೆಲಂಗಾಣ): ತಾಯಿಯೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ತಾಯಿ ಸಾವಿನ ಸುದ್ದಿ ಕೇಳಿದ ಮನೆಯ ಹಿರಿಯ ಮಗ ಮೃತಪಟ್ಟಿದ್ದಾನೆ.

ತಿರುಮಲಾಯಪಾಲೆಂ ತಾಲೂಕಿನ ಬಚ್ಚೊಡು ಗ್ರಾಮದಲ್ಲಿ ಶುಕ್ರವಾರ ತಾಯಿ - ಮಗ ಇಬ್ಬರು ಒಂದೇ ದಿನ ಸಾವನ್ನಪ್ಪಿದ್ದಾರೆ. ಇಲ್ಲಿನ ಪುಲಿಪಲುಪುಲ ಶಾಂತಮ್ಮ (70) ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇವರಿಗೆ ಆರು ಜನ ಗಂಡು ಮಕ್ಕಳ, ನಾಲ್ವರು ಹೆಣ್ಣು ಮಕ್ಕಳಿದ್ದಾರೆ.

ಇನ್ನು ತಾಯಿ ಮೃತಪಟ್ಟಿರುವ ಸುದ್ದಿ ಹಿರಿಯ ಮಗ ವೆಂಕನ್ನ (50)ಗೆ ಮುಟ್ಟಿಸಿದ್ದಾರೆ. ಸುದ್ದಿ ತಿಳಿದ ವೆಂಕನ್ನ ನಿಂತಲ್ಲೇ ಕುಸಿದು ಬಿದ್ದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡುವಷ್ಟರಲ್ಲೇ ವೆಂಕಣ್ಣ ಸಹ ಇಹಲೋಕ ತ್ಯಜಿಸಿದರು. ಇನ್ನು ವೆಂಕನ್ನನಿಗೆ ಹೆಂಡ್ತಿ, ಎರಡು ಹೆಣ್ಣುಮಕ್ಕಳು, ಒಂದು ಗಂಡ ಮಗನಿದ್ದಾನೆ.

ಒಂದೇ ದಿನ ತಾಯಿ-ಮಗ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ABOUT THE AUTHOR

...view details