ಕರ್ನಾಟಕ

karnataka

'ನನ್ನ ಮಗಳನ್ನು ಹುಡುಕಿಕೊಡಿ, ಇಲ್ಲಾಂದ್ರೆ ಇಲ್ಲೇ ಉಪವಾಸ ಇದ್ದು ಸಾಯ್ತೇನೆ': ತಾಯಿಯ ಅಳಲು

By

Published : May 7, 2020, 3:20 PM IST

ತನ್ನ ಮಗಳಿಗೇನಾದರೂ ತೊಂದರೆ ಉಂಟಾದರೆ ಅದಕ್ಕೆ ನೆರವಾಗಿ ಪೊಲೀಸರೇ ಹೊಣೆಯಾಗ್ತಾರೆ. ಅವರು ತಮ್ಮ ಮೊಂಡುತನದಿಂದ ನನ್ನ ಮಗಳನ್ನು ಕೊಲ್ಲುತ್ತಾರೋ ಎಂಬ ಭಯವೂ ಕಾಡ್ತಿದೆ. ಹಾಗಾಗಿ ಪೊಲೀಸರು ಮಗಳನ್ನು ನನ್ನ ಬಳಿ ಕರೆತರುವವರೆಗೆ ಉಪವಾಸ ಕುಳಿತಿರುವುದಾಗಿ ಹೇಳಿದ್ದಾಳೆ.

mother on hunger strike
ಉಪವಾಸ ಸತ್ಯಾಗ್ರಹ

ಭಾದೋಹಿ(ಉತ್ತರ ಪ್ರದೇಶ):ಜಿಲ್ಲೆಯ ಜಿಲ್ಲೆಯ ಗೋಪಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯ ಮಹಿಳೆಯೊಬ್ಬರು ಕಳೆದ 3 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಳೆ.

9 ನೇ ತರಗತಿಯಲ್ಲಿ ಓದುತ್ತಿರುವ ತನ್ನ ಮಗಳು ಮಾರ್ಚ್ 14ರ ಮುಂಜಾನೆ ಮನೆಯಿಂದ ಹೊರ ಹೋದ ಆಕೆ ಕಾಣೆಯಾಗಿದ್ದಾಳೆ. ಒಂದೂವರೆ ತಿಂಗಳ ಹಿಂದೆ ಆಕೆಯನ್ನು ಅಪಹರಣ ಮಾಡಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಕೆ ಇರುವ ಸ್ಥಳವನ್ನೂ ಪತ್ತೆಹಚ್ಚಿದ್ದಾರೆ. ಆಕೆ ಸೂರತ್​ನಲ್ಲಿ ಇರುವುದಾಗಿ ಪತ್ತೆಹಚ್ಚಿದ ಅವರು, ಆಕೆಯನ್ನು ಹುಡುಕಲು ಹೋಗಿಲ್ಲ ಎಂದು ತಾಯಿ ದೂರಿದ್ದಾಳೆ.

ಇನ್ನು ಈ ಅಪಹರಣದ ಕುರಿತಾಗಿ ಒಂದುವರೆ ತಿಂಗಳ ಹಿಂದೆಯೇ ಓರ್ವ ಯುವಕನ ವಿರುದ್ಧ ದೂರು ದಾಖಲಾಗಿದೆ. ಆದರೆ ಹದಿಹರೆಯದ ತನ್ನ ಮಗಳ ಪತ್ತೆ ಇನ್ನೂ ಆಗಿಲ್ಲ. ಆ ಯುವಕನನ್ನು ಕೂಡಾ ಈವರೆಗೆ ಬಂಧಿಸಿಲ್ಲ. ಅಲ್ಲದೆ ಸೋನಿಯಾ ಪಾಂಡ್ ಪ್ರದೇಶದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಡಿಐಜಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಎಲ್ಲಾ ಪೊಲೀಸ್ ಕಚೇರಿಗಳಿಗೆ ಭೇಟಿ ನೀಡಿದ್ದೇನೆ ಎಂದು ತಾಯಿ ಅಳಲು ತೋಡಿಕೊಂಡಿದ್ದಾಳೆ.

ತನ್ನ ಮಗಳಿಗೇನಾದರೂ ತೊಂದರೆ ಉಂಟಾದರೆ ಅದಕ್ಕೆ ನೆರವಾಗಿ ಪೊಲೀಸರೇ ಹೊಣೆಯಾಗ್ತಾರೆ. ಅವರು ತಮ್ಮ ಮೊಂಡುತನದಿಂದ ನನ್ನ ಮಗಳನ್ನು ಕೊಲ್ಲುತ್ತಾರೋ ಎಂಬ ಭಯವೂ ಕಾಡ್ತಿದೆ. ಹಾಗಾಗಿ ಪೊಲೀಸರು ಮಗಳನ್ನು ನನ್ನ ಬಳಿ ಕರೆತರುವವರೆಗೆ ಉಪವಾಸ ಕುಳಿತಿರುವುದಾಗಿ ಹೇಳಿದ್ದಾಳೆ.

ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕುವ ಕಾರ್ಯ ಕೈಗೊಂಡಿದ್ದಾರೆ. ಆರೋಪಿಗಳ ಪತ್ತೆ ಕಾರ್ಯವೂ ನಡೆದಿದೆ. ಆದರೆ ದೇಶಾದ್ಯಂತ ಲಾಕ್​ಡೌನ್​ ಇರುವುದರಿಂದ ಪೊಲೀಸರಿಗೆ ಹೊರ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ವರಿಷ್ಠಾಧಿಕಾರಿ ರಾಮ್ ಬದನ್ ಸಿಂಗ್ ಹೇಳಿಕೆ ನೀಡಿದ್ದಾರೆ.

ABOUT THE AUTHOR

...view details