ಮುಂಬೈ:ಒಡವೆ ವಿಚಾರಕ್ಕೆ ತಾಯಿ-ಮಗಳ ನಡುವೆ ಜಗಳ ನಡೆದಿದ್ದು, ಪರಿಣಾಮ ಕಟ್ಟಡವೊಂದರ 7ನೇ ಮಹಡಿಯಿಂದ ಹಾರಿ 51 ವರ್ಷದ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಒಡವೆ ವಿಚಾರಕ್ಕೆ ಜಗಳ: ಕಟ್ಟಡದಿಂದ ಜಿಗಿದು ತಾಯಿ ಸಾವು, ಮಗಳು ಆತ್ಮಹತ್ಯೆಗೆ ಯತ್ನ - ಮುಂಬೈ ಪೊಲೀಸ್
ಒಡವೆ ವಿಚಾರಕ್ಕೆ ತಾಯಿ-ಮಗಳ ನಡುವೆ ಜಗಳ ನಡೆದಿದ್ದು, ಇತ್ತ ಕಟ್ಟಡದಿಂದ ಜಿಗಿದು ತಾಯಿ ಮೃತಪಟ್ಟಿದ್ದರೆ, ಅತ್ತ ಮಗಳು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಮುಂಬೈ ಪೊಲೀಸ್
31 ವರ್ಷದ ಮಗಳು ಕೂಡ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನ ಆಸ್ಪತ್ರೆಗೆ ದಾಖಲಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ಹೊರಗಡೆ ತೆರಳಿದ್ದ ತಂದೆ, ಮನೆಗೆ ಹಿಂದಿರುಗುವಷ್ಟರಲ್ಲಿ ಘಟನೆ ನಡೆದಿದ್ದು, ಮಗಳು ಹಾಗೂ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹೆಂಡತಿ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪತ್ನಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಒಶಿವಾರಾ ಠಾಣಾ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.