ಜಬಲಪುರ್(ಮಧ್ಯಪ್ರದೇಶ): 32 ವರ್ಷದ ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದು, ಆಕೆ ಸಾವನ್ನಪ್ಪುವುದಕ್ಕೂ ಮುಂಚಿತವಾಗಿ ತನ್ನ 2 ವರ್ಷದ ಮಗಳ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲಪುರ್ದಲ್ಲಿ ನಡೆದಿದೆ.
ಮಗನ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ 32 ವರ್ಷದ ತಾಯಿ! ಕಾರಣ? - ಆತ್ಮಹತ್ಯೆಗೆ ಶರಣಾದ ಮಹಿಳೆ
32 ವರ್ಷದ ಮಹಿಳೆಯೋರ್ವಳು ತನ್ನ ಮಗಳ ಕೊಲೆ ಮಾಡಿ ತದನಂತರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಕಳೇದೆರಡು ವರ್ಷಗಳ ಹಿಂದೆ ವಂದನಾ ಸಿಂಗ್ ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದಾದ ಬಳಿಕ ತಮ್ಮ ಪೋಷಕರ ಬಳಿ ವಾಸವಾಗಿದ್ದ ಮಹಿಳೆ ಇದೀಗ ಏಕಾಏಕಿಯಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ ವಂದನಾ ಸಿಂಗ್ ಪೋಷಕರು ಆಘಾತಕ್ಕೊಳಗಾಗಿದ್ದು, ಆಕೆ ತೆಗೆದುಕೊಂಡಿರುವ ನಿರ್ಧಾರ ಹಿಂದೆ ಯಾವ ಕಾರಣ ಇದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣಾ ಅಧಿಕಾರಿ ನೀರಜ್ ವರ್ಮಾ ಮಾತನಾಡಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.