ಪಶ್ಚಿಮ ಗೋದಾವರಿ:ಮಗಳು ಬಾತ್ರೂಮಿನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು, ಪ್ರೀತಿಯ ಮಗಳ ಸಾವು ನೋಡಿದ ತಾಯಿ ಸಹ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಣ್ಮುಂದೆ ಮಗಳ ಸಾವು, ಕ್ಷಣಾರ್ಧದಲ್ಲೇ ಎದೆಬಡಿತ ನಿಲ್ಲಿಸಿದ ತಾಯಿ ಹೃದಯ! - ಮಗಳ ಸಾವು
ಕಣ್ಮುಂದೆ ಮಗಳ ದಾರುಣ ಸಾವು ಕಂಡ ತಾಯಿಯೋರ್ವಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ನಡೆದಿದೆ.
mother dies after daughter dies
ಇಂತಹ ಹೃದಯ ವಿದ್ರಾವಕ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ದೇವರಪಲ್ಲಿಯಲ್ಲಿ ನಡೆದಿದೆ. ಶುಕ್ರವಾರ ಬೆಳಗ್ಗೆ ಸ್ನಾನಕ್ಕೆಂದು ಬಾತ್ರೂಂಗೆ ಹೋದ ಸರಿತಾ (21) ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ. ಮಗಳ ಹಠಾತ್ ಸಾವು ಕಂಡು ದಿಗ್ಭ್ರಾಂತಿಗೊಳಗಾದ ತಾಯಿ ಸಹ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಆ ಮೂಲಕ ಕುಟುಂಬದಲ್ಲಿ ಒಂದೇ ಬಾರಿ ಎರಡು ಸಾವು ಉಂಟಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Last Updated : Jun 13, 2020, 2:27 PM IST