ಕಡಪಾ( ಆಂಧ್ರಪ್ರದೇಶ):ಚಿಕ್ಕ ವಯಸ್ಸಿನಲ್ಲಿ ತಾಯಿಯಿಂದ ದೂರವಾದ ಪಾಕಿಸ್ತಾನಿ ಯುವಕನೊಬ್ಬರಾಜ್ಯದ ಕಡಪ ಜಿಲ್ಲೆಯ ರೈಲ್ವೆ ಕೋಡೂರಿನಲ್ಲಿರುವ ತನ್ನ ಅಮ್ಮನನ್ನು ಬಹುದಿನಗಳ ಬಳಿಕ ಭೇಟಿಯಾಗಿದ್ದಾನೆ .
ಹೀಗೆ ಭೇಟಿಯಾದ ಮಗನ ಹೆಸರು ವಾಲಿದ್.. ಆತನ ತಾಯಿಯೇ ಶೇಕ್ ನೂರ್. ಈ ಇಬ್ಬರು ಹಲವು ವರ್ಷಗಳ ಬಳಿಕ ಭೇಟಿಯಾಗಿದ್ದಾರೆ. ಅಂದ ಹಾಗೆ ಶೇಖ್ ನೂರ್ ಪಾಕಿಸ್ತಾನದ ವ್ಯಕ್ತಿಯೊಬ್ಬರನ್ನು ಮದುವೆ ಆಗಿದ್ದರು. ಚಿಕ್ಕ ವಯಸ್ಸಿನಲ್ಲಿ ವಾಲಿದ್ನನ್ನು ಭಾರತಕ್ಕೆ ಕೂಡ ಕರೆ ತಂದಿದ್ದರಂತೆ. ಬಳಿಕ ಕೆಲ ವೈಯಕ್ತಿಕ ಕಾರಣಗಳಿಂದ ದಂಪತಿ ಬೇರೆ ಬೇರೆಯಾಗಿದ್ದರು. ಆ ಬಳಿಕ ವಾಲಿದ್ ತನ್ನ ತಂದೆಯೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದರು. ಇನ್ನು ತಾಯಿ ಶೇಖ್ ನೂರು ಭಾರತಕ್ಕೆ ಹಿಂದಿರುಗಿದ್ದರು. ಅಂದಿನಿಂದ ತಾಯಿ ನೆನಪಲ್ಲೇ ಕಾಲ ಕಳೆದ ಮಗ ವಾಲಿದ್ ತಾಯಿಯನ್ನು ನೋಡಲು ಕಾತರರಾಗಿದ್ದರು.