ಝಾನ್ಸಿ (ಉತ್ತರಪ್ರದೇಶ): ಎಂಟು ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಕಾನ್ಪುರ ಎನ್ಕೌಂಟರ್ನ ಪ್ರಮುಖ ಆರೋಪಿ ಬಂಧಿತ ರೌಡಿಶೀಟರ್ ವಿಕಾಸ್ ದುಬೆ ಇಂದು ಕಾನ್ಪುರ ತಲುಪಿದ್ದಾನೆ.
ಕಾನ್ಪುರ ತಲುಪಿದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದುಬೆ ನಿನ್ನೆ ಉಜ್ಜೈನಿಯ ಮಹಾಕಾಲ ದೇವಸ್ಥಾನದಲ್ಲಿ ಮಧ್ಯಪ್ರದೇಶ ಪೊಲೀಸರಿಗೆ ಸೆರೆಸಿಕ್ಕ ಈತನನ್ನು ಉತ್ತರಪ್ರದೇಶ ಪೊಲೀಸರಿಗೆ ಒಪ್ಪಿಸಲಾಗಿದ್ದು, ಉಜ್ಜೈನಿಯಿಂದ ಕಾನ್ಪುರಕ್ಕೆ ಕರೆ ತರಲಾಗಿದೆ.
ಉಜ್ಜೈನಿಯಲ್ಲಿ ಗುರವಾರ ಬೆಳಗ್ಗೆ ವಿಕಾಸ್ ದುಬೆಯನ್ನು ಅರೆಸ್ಟ್ ಮಾಡಲಾಗಿತ್ತು. ಜುಲೈ 3ರಂದು ಉತ್ತರಪ್ರದೇಶದ ಕಾನ್ಪುರದ ಬಿಕ್ರು ಗ್ರಾಮದಲ್ಲಿ ವಿಕಾಸ ದುಬೆ ಬಂಧನಕ್ಕೆ ತೆರಳಿದ್ದ ವೇಳೆ, ಆತ ಹಾಗೂ ಆತನ ಸಹಚರರು ಪೊಲೀಸರ ಮೇಲೆ ದಾಳಿ ನಡೆಸಿ 8 ಸಿಬ್ಬಂದಿಯನ್ನ ಹತ್ಯೆ ಮಾಡಿದ್ದರು. ಘಟನೆ ನಡೆದ 7 ದಿನಗಳ ಬಳಿಕ ದುಬೆ ಸೆರೆ ಸಿಕ್ಕಿದ್ದಾನೆ.
ಬಿಕ್ರು ಗ್ರಾಮದ ನಿವಾಸಿಯಾಗಿರುವ ವಿಕಾಸ್ ದುಬೆ ವಿರುದ್ಧ ಕೊಲೆ, ದರೋಡೆ ಮತ್ತು ಅಪಹರಣ ಸೇರಿ 60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ಗಳು ದಾಖಲಾಗಿವೆ. 2001 ರಲ್ಲಿ ಬಿಜೆಪಿ ನಾಯಕ ಸಂತೋಷ್ ಶುಕ್ಲಾ ಅವರನ್ನು ಹತ್ಯೆ ಮಾಡಿದ ಆರೋಪ ಕೂಡ ದುಬೆ ಮೇಲಿದೆ.