ನೋಯ್ಡಾ:ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ರದ್ದುಗೊಳಿಸುವ ಸೌಲಭ್ಯವನ್ನು 2020ರ ಮೇ 22ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ಸ್ಥಳೀಯ ಜನರ ಅಗತ್ಯತೆಗಳಿಗೆ ಅನುಗುಣವಾಗಿ ಬುಕ್ಕಿಂಗ್/ ರದ್ದತಿಗೆ ಮೀಸಲಾತಿ ಕೌಂಟರ್‌ಗಳು ತೆರೆಯುವಂತೆ ವಲಯ ರೈಲ್ವೆಗೆ ಸೂಚನೆ ನೀಡಿದೆ.
ನೋಯ್ಡಾದ ಸೆಕ್ಟರ್ -33 ರಲ್ಲಿ ಮೀಸಲಾತಿ ಕೌಂಟರ್ಗೆ ಬುಕಿಂಗ್ಗಾಗಿ ಹಲವು ಪ್ರಯಾಣಿಕರು ಬರುತ್ತಿರುವಂತೆ ಕಂಡರೇ, ಬಹುತೇಕರು ಟಿಕೆಟ್ ರದ್ಧತಿಗಾಗಿ ಬಂದಿದ್ದರು. ಮೂಲಗಳ ಪ್ರಕಾರ, 8.47 ಲಕ್ಷ ರೂ. ಮೌಲ್ಯದ ಟಿಕೆಟ್ ಕಾಯ್ದಿರಿಸಿದ್ದರು. 16. 73 ಲಕ್ಷ ಟಿಕೆಟ್ಗಳು ರದ್ದಾಗಿವೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮೀಸಲಾತಿಗಿಂತ ರದ್ದು ಉದ್ದೇಶಕ್ಕೆ ಹೆಚ್ಚಿನ ಪ್ರಯಾಣಿಕರು ಬರುತ್ತಿದ್ದಾರೆ ಎಂದು ಮುಖ್ಯ ರಿಸರ್ವ್ ಮೇಲ್ವಿಚಾರಕ ಸುರೇಶ್ ಚಂದ್ ತ್ಯಾಗಿ ಅವರು ಹೇಳಿದರು.
ಜೂನ್ 1ರಿಂದ ಭಾರತೀಯ ರೈಲ್ವೆ 200 ರೈಲುಗಳ ಕಾರ್ಯಾಚರಣೆ ಪ್ರಾರಂಭಿಸಲಿದೆ. ಟಿಕೆಟ್‌ಗಳನ್ನು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಅಪ್ಲಿಕೇಷನ್‌ನ ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು.