ನವದೆಹಲಿ: ಇಂದು ಮಧ್ಯಾಹ್ನ 3.30ಕ್ಕೆ ಸಿಯಾಚಿನ್‌ನಲ್ಲಿ ಹಿಮಪಾತವಾಗಿದ್ದು, ಹಿಮದಡಿ ಸಿಲುಕಿರುವ ಎಂಟು ಮಂದಿ ಯೋಧರಲ್ಲಿ ನಾಲ್ವರು ಹುತಾತ್ಮರಾಗಿದ್ದಾರೆ.
ಸಿಯಾಚಿನ್‌ನಲ್ಲಿ ಹಿಮಪಾತ.. ಇಬ್ಬರು ನಾಗರಿಕರು ಸೇರಿ ನಾಲ್ವರು ಯೋಧರು ಹುತಾತ್ಮ! - ಸಿಯಾಚಿನ್‌ನಲ್ಲಿ ಹಿಮಪಾತ ಸುದ್ದಿ
ಇಂದು ಮಧ್ಯಾಹ್ನ 3.30ರ ಸುಮಾರಿಗೆ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದೇ ಪರಿಗಣಿಸಲಾಗಿರುವ ಸಿಯಾಚಿನ್‌ನಲ್ಲಿ ಹಿಮಪಾತವಾಗಿದ್ದು, ಹಿಮದಡಿ ಸಿಲುಕಿರುವ ಎಂಟು ಯೋಧರಲ್ಲಿ ನಾಲ್ವರು ಹುತಾತ್ಮರಾಗಿದ್ದಾರೆ.
ಗಸ್ತು ಕಾರ್ಯಾಚರಣೆ ವೇಳೆ ನಾಗರಿಕರು ಸೇರಿ ಯೋಧರು ಹಿಮದಡಿ ಸಿಲುಕಿದ್ದರು. ನಾಗರಿಕರಿಬ್ಬರು ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. -30 ಡಿಗ್ರಿ ಚಳಿಯ ಪ್ರದೇಶವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2016ರ ಫೆಬ್ರುವರಿಯಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ 10 ಜನ ಯೋಧರು ಮೃತಪಟ್ಟಿದ್ದರು. 25 ಅಡಿ ಆಳದಲ್ಲಿ ಹಿಮದಡಿ ಸಿಲುಕಿದ್ದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರನ್ನು ಆರು ದಿನಗಳ ಕಾರ್ಯಾಚರಣೆ ಬಳಿಕ ಹೊರತೆಗೆಯಲಾಗಿತ್ತು. ಆದರೆ, ಅವರು ಬಳಿಕ ಮೃತಪಟ್ಟಿದ್ದರು. ಘಟನೆಯಲ್ಲಿ ಮೈಸೂರಿನ ಹೆಚ್ ಡಿ ಕೋಟೆಯ ಮಹೇಶ್, ಹಾಸನದ ಸುಬೇದಾರ್ ಟಿ ಟಿ ನಾಗೇಶ್ ಸಹ ಘಟನೆಯಲ್ಲಿ ಹುತಾತ್ಮರಾಗಿದ್ದರು.