ಹೈದರಾಬಾದ್: ಕಾಂಗ್ರೆಸ್ ಮಾಜಿ ಎಂಪಿ ಸಹೋದರನ ಮನೆಯಲ್ಲಿ ಕಳ್ಳತನ ನಡೆದಿದೆ. ಸುಮಾರು 2 ರಿಂದ 3 ಕೋಟಿಗೂ ಹೆಚ್ಚು ಬೆಲೆಬಾಳುವ ವಜ್ರಾಭರಣ ಲೂಟಿಯಾಗಿರುವ ಘಟನೆ ಇಲ್ಲಿನ ಬಂಜಾರಾಹಿಲ್ಸ್ನಲ್ಲಿ ನಡೆದಿದೆ.
ಕೈ ಲೀಡರ್ ಸಹೋದರನ ಮನೆಯಲ್ಲಿ ಕಳ್ಳತನ... ಬಿಲ್ಡರ್ ಮನೆಯಲ್ಲಿ 2 - 3 ಕೋಟಿ ವಜ್ರಾಭರಣ ಲೂಟಿ! - ಹೈದರಾಬಾದ್ 2 ಕೋಟಿ ಕಳ್ಳತನ ಸುದ್ದಿ
ಕಾಂಗ್ರೆಸ್ ನಾಯಕರೊಬ್ಬರ ಸಹೋದರನ ಮನೆಯಲ್ಲಿ ಭಾರೀ ಕಳ್ಳತನ ನಡೆದಿದ್ದು, ಸುಮಾರು ಎರಡರಿಂದ ಮೂರು ಕೋಟಿಗೂ ಅಧಿಕ ಬೆಲೆಬಾಳುವ ವಜ್ರಾಭರಣ ದರೋಡೆಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಕಾಂಗ್ರೆಸ್ ಎಂಪಿ ಟಿ. ಸುಬ್ಬಿರಾಮರೆಡ್ಡಿ ಅಣ್ಣನ ಮಗ ಉತ್ತಮರೆಡ್ಡಿ ಬಿಲ್ಡರ್ ಆಗಿದ್ದು, ಅವರ ಮನೆಯಲ್ಲಿ ಕಳ್ಳತವಾಗಿದೆ. ಸುಮಾರು 2 ರಿಂದ 3 ಕೋಟಿಗೂ ಅಧಿಕ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದರೋಡೆ ಮಾಡಿದ್ದಾರೆ.
ವಜ್ರ, ಬಂಗಾರ ಮತ್ತು ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಖದೀಮರು ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ಘಟನೆ ಕುರಿತು ಬಂಜಾರಾಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.