ನವದೆಹಲಿ: ಅಡ್ಮಿರಲ್ ಕರಾಂಬಿರ್ ಸಿಂಗ್ ನೌಕಾ ಸಿಬ್ಬಂದಿ ದಳದ ಮುಖ್ಯಸ್ಥರಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.
ನವದೆಹಲಿಯ ಸೌತ್ ಬ್ಲಾಕ್ ಲಾನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ವರ್ಷಗಳಿಂದ ನೌಕಾ ಸಿಬ್ಬಂದಿ ದಳದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಡ್ಮಿರಲ್ ಸುನೀಲ್ ಲ್ಯಾನ್ಬ್ ಅವರಿಂದ ದಂಡ ಪಡೆಯುವ ಮೂಲಕಕರಾಂಬಿರ್ ಸಿಂಗ್ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಕರಾಂಬಿರ್ ಸಿಂಗ್, ನೌಕಾಪಡೆಯು ಬಲಿಷ್ಠ ಅಡಿಪಾಯವನ್ನು ಹೊಂದಿದೆ ಹಾಗೂ ಎತ್ತರದ ಸ್ಥಾನ ತಲುಪಿರುವುದನ್ನು ನನ್ನ ಹಿಂದಿನವರು ಖಚಿತಪಡಿಸಿದ್ದಾರೆ. ಮುಂದೆ ಈ ಸ್ಥಾನಮಾನಗಳನ್ನು ಮುಂದುವರೆಸಿಕೊಂಡು ಹೋಗುವುದರತ್ತ ನಾನು ಎಲ್ಲ ರೀತಿ ಪ್ರಯತ್ನ ಮಾಡುವೆ ಎಂದರು.
ದೇಶಕ್ಕೆ ಬಲಾಢ್ಯವಾದ ನೌಕಾಪಡೆಯನ್ನು ಒದಗಿಸುವ ಮೂಲಕ ದೇಶದ ಭದ್ರತಾ ಸವಾಲುಗಳನ್ನು ಉತ್ತಮವಾಗಿ ಎದುರಿಸಲಾಗುವುದು ಎಂದು ಇದೇ ವೇಳೆ ಸಿಂಗ್ ತಿಳಿಸಿದ್ದಾರೆ.