ನವದೆಹಲಿ:ಪಕ್ಷದ ಸಂಘಟನೆ ಬಗ್ಗೆ ಕೂಲಂಕಷ ಪರಿಶೀಲನೆಗಾಗಿ ಕೆಲವು ತಿಂಗಳ ಹಿಂದೆ ಪತ್ರ ಬರೆದಿದ್ದ ಪಕ್ಷದ ಮುಖಂಡರ ತಂಡದ ಜತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಸಭೆ ನಡೆಸಿದರು.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 23 ಹಿರಿಯ ಕಾಂಗ್ರೆಸ್ ನಾಯಕರ ಸಭೆಯನ್ನು ನಡೆಸಿದರು. ಅವರು ನಾಲ್ಕು ತಿಂಗಳ ಹಿಂದೆ ಪಕ್ಷದ ಸಂಘಟನೆಯಲ್ಲಿ ಬದಲಾವಣೆ ಹಾಗೂ ನಾಯಕತ್ವದ ಬಗ್ಗೆ ಪತ್ರ ಬರೆದಿದ್ದರು. ಸೋನಿಯಾ ಅವರ ಕೆಲವು ಆಪ್ತರನ್ನೂ ಒಳಗೊಂಡ ಐದು ಗಂಟೆಗಳ ಸಭೆ ನಡೆಯಿತು.
ಅಶೋಕ್ ಗೆಹ್ಲೋಟ್, ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಬಿ ಎಸ್ ಹೂಡಾ, ಅಂಬಿಕಾ ಸೋನಿ ಮತ್ತು ಪಿ ಚಿದಂಬರಂ ಅವರು ಜನಪಥ್ ರಸ್ತೆಯಲ್ಲಿರುವ ಸೋನಿಯಾ ಅವರ ನಿವಾಸಕ್ಕೆ ಆಗಮಿಸಿದರು. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶ ಪಕ್ಷದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.