ವಿಜಯವಾಡ:ಮಹಾಮಾರಿ ಕೋವಿಡ್ -19 ವೈರಸ್ನಿಂದ ಧ್ವಂಸಗೊಂಡ ಇಟಲಿಯಿಂದ ಸ್ಥಳಾಂತರಿಸಲ್ಪಟ್ಟ ಸುಮಾರು ಒಂದು ತಿಂಗಳ ನಂತರ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಕ್ವಾರಂಟೈನ್ನಲ್ಲಿದ್ದ 33 ಆಂಧ್ರಪ್ರದೇಶದ ಮೂಲದ ವಿದ್ಯಾರ್ಥಿಗಳು ಮರಳಿ ತಮ್ಮ ನಾಡನ್ನು ತಲುಪಿದ್ದಾರೆ.
ಕ್ವಾರಂಟೈನ ಮುಗಿದ ನಂತರ ಚಾವ್ಲಾದ ಐಟಿಬಿಪಿ ಶಿಬಿರದ ಅಧಿಕಾರಿಗಳು ಅವರಿಗೆ ಸಹಾಯ ಮಾಡಲು ನಿರಾಕರಿಸಿದ್ದರಿಂದ ಸ್ವತಃ ವಿದ್ಯಾರ್ಥಿಗಳು ಸ್ವಂತ ಹಣದಿಂದ ಬಸ್ ವ್ಯವಸ್ಥೆ ಮಾಡಿಕೊಂಡು ತಮ್ಮ ಸ್ಥಾನಕ್ಕೆ ಮರಳಿ ಬಂದಿದ್ದಾರೆ. ಮಾರ್ಚ್ 15 ರಂದು ವಿಶೇಷ ಏರ್ ಇಂಡಿಯಾ ವಿಮಾನ ಮಿಲನ್ ಮೂಲಕ ಭಾರತ ಸರ್ಕಾರ, ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆ ತಂದಿತ್ತು. ಮಾರ್ಚ್ 15 ರಿಂದ 29 ರವರೆಗೂ ಕ್ವಾರಂಟೈನ್ನಲ್ಲಿದ್ದ ವಿದ್ಯಾರ್ಥಿಗಳನ್ನು ನಿತ್ಯ ಪರೀಕ್ಷಿಸಲಾಗುತ್ತಿತ್ತು. ಅವರಲ್ಲಿ ಯಾವುದೇ ರೀತಿಯ ಸೋಂಕು ಕಂಡು ಬಾರದ ಕಾರಣ ಬಿಡುಗಡೆಗೊಳಿಸಲಾಗಿದೆ.