ದೆಹಲಿ: ಜೂನ್ 9, ಮಂಗಳವಾರದ ವೇಳೆಗೆ ಪೂರ್ವ ಮಧ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ರಚನೆಯಾಗುವ ಸಾಧ್ಯತೆ ಇದ್ದು ಜೂನ್ 11, 12 ರ ವೇಳೆಗೆ ಪಶ್ಚಿಮ ಬಂಗಾಳ, ಒಡಿಶಾ, ಸಿಕ್ಕಿಂ ಹಾಗೂ ಈಶಾನ್ಯ ರಾಜ್ಯಗಳ ಇತರ ಭಾಗಗಳಿಗೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಜೂನ್ 12ರ ವೇಳೆಗೆ ಒಡಿಶಾ, ಪ.ಬಂಗಾಳ ಈಶಾನ್ಯ ರಾಜ್ಯಗಳಿಗೆ ಮುಂಗಾರು ಪ್ರವೇಶ
ಜೂನ್ 11,12 ರ ವೇಳೆಗೆ ಸಿಕ್ಕಿಂ, ಒಡಿಶಾ, ಪಶ್ಚಿಮ ಬಂಗಾಳದ ಕೆಲವು ಭಾಗಗಳಿಗೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಜಿ.ಕೆ. ದಾಸ್ ಮಾಹಿತಿ ನೀಡಿದ್ದಾರೆ.
ಕಡಿಮೆ ಒತ್ತಡವಿರುವ ಪ್ರದೇಶಗಳಿಂದ ಮಾನ್ಸೂನ್ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆ ಇದ್ದು ಬುಧವಾರದ ವೇಳೆಗೆ ಹೆಚ್ಚು ತೀವ್ರತೆ ಪಡೆಯಲಿದೆ. ಜೂನ್ 11,12 ರ ವೇಳೆಗೆ ಈಶಾನ್ಯ ರಾಜ್ಯಗಳಾದ ಸಿಕ್ಕಿಂ, ಒಡಿಶಾ, ಪಶ್ಚಿಮ ಬಂಗಾಳದ ಕೆಲವು ಭಾಗಗಳಿಗೆ ನೈರುತ್ಯ ಮಾನ್ಸೂನ್ ಪ್ರವೇಶಿಸಲು ಪರಿಸ್ಥಿತಿ ಅನುಕೂಲವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಜಿ.ಕೆ. ದಾಸ್ ಹೇಳಿದ್ದಾರೆ.
ಕೊಲ್ಕತ್ತಾ ಸೇರಿದಂತೆ ಬಂಗಾಳದ ದಕ್ಷಿಣ ಭಾಗದ ಕೆಲವೊಂದು ಜಿಲ್ಲೆಗಳಲ್ಲಿ ಭಾನುವಾರ ಮಧ್ಯಾಹ್ನ ಮಳೆ ಸುರಿದಿದ್ದು ಬೇಸಿಗೆಯಿಂದ ಬಸವಳಿದಿದ್ದ ಜನರಿಗೆ ಸ್ವಲ್ಪ ತಣ್ಣಗಿನ ಅನುಭವ ನೀಡಿದೆ. ಈ ಪ್ರದೇಶಗಳಲ್ಲಿ 37-40 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ಇತ್ತು. ಕೆಲವೊಂದು ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಿರುವ ದೃಶ್ಯಗಳು ಕೂಡಾ ಕಂಡುಬಂದಿದೆ.