ನವದೆಹಲಿ:ಕೋವಿಡ್-19 ಸಾಂಕ್ರಾಮಿಕ ಭೀತಿಯ ನಡುವೆಯೂ ಹಲವು ಮುಂಜಾಗ್ರತಾ ಕ್ರಮಗಳ ನಡುವೆ ಸಂಸತ್ ಮುಂಗಾರು ಅಧಿವೇಶನ ಇಂದು ಬೆಳಗ್ಗೆ 9 ಗಂಟೆಗೆ ಆರಂಭವಾಗಿದೆ.
ಮುಂಗಾರು ಅಧಿವೇಶನ ಆರಂಭ: ಅಗಲಿದ ಗಣ್ಯರಿಗೆ ಲೋಕಸಭೆಯಲ್ಲಿ ಸಂತಾಪ - ಮುಂಗಾರು ಅಧಿವೇಶನ ಆರಂಭ
ಮುಂಗಾರು ಅಧಿವೇಶನದ ಮೊದಲನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ಅಗಲಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಈ ವರ್ಷ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
. ಲೋಕಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಸದಸ್ಯರು
ಕಲಾಪ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ಅಗಲಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಛತ್ತೀಸ್ಗಢ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ, ಮಧ್ಯ ಪ್ರದೇಶ ರಾಜ್ಯಪಾಲರಾಗಿದ್ದ ಲಾಲ್ಜಿ ಟಂಡನ್, ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ದಂತಕಥೆ ಪಂಡಿತ್ ಜಸ್ರಾಜ್, ಉತ್ತರ ಪ್ರದೇಶ ಸಚಿವರಾಗಿದ್ದ ಕಮಲ್ ರಾಣಿ, ಚೇತನ್ ಚೌಹಾಣ್ ಮತ್ತು ಕೇಂದ್ರ ಸರ್ಕಾರದ ಮಾಜಿ ಸಚಿವ ಡಾ. ರಘುವಂಶ್ ಪ್ರಸಾದ್ ಸಿಂಗ್ ಹಾಗೂ ಈ ವರ್ಷ ನಿಧನ ಹೊಂದಿದ ಇತರ ಗಣ್ಯರಿಗೆ ಸದಸ್ಯರು ಸಂತಾಪ ಸೂಚಿಸಿದರು.
ಸಂತಾಪ ಸೂಚನೆ ನಂತರ ಕಲಾಪವನ್ನು ಒಂದು ಗಂಟೆಗಳ ಅವಧಿಗೆ ಮುಂದೂಡಲಾಯಿತು.