ನವದೆಹಲಿ: ದೇಶದಲ್ಲಿ ಜೂನ್ ಮತ್ತು ಸೆಪ್ಟೆಂಬರ್ ನಡುವಿನ ದೀರ್ಘಕಾಲೀನ ಸರಾಸರಿಗಿಂತಲೂ ಅಧಿಕ ಮಳೆ ಬೀಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಉತ್ತಮ ಮಾನ್ಸೂನ್‌ಗೆ ಪರಿಸ್ಥಿತಿಗಳು ಹೆಚ್ಚು ಅನುಕೂಲಕರವಾಗುತ್ತಿವೆ. ಆದ್ದರಿಂದ ದೇಶಾದ್ಯಂತ ಜೂನ್ ಮತ್ತು ಸೆಪ್ಟೆಂಬರ್ ನಡುವಿನ ಮಾನ್ಸೂನ್ ಮಳೆಯು ಅದರ ದೀರ್ಘಕಾಲೀನ ಸರಾಸರಿಗಿಂತ 88 ಸೆಂ.ಮೀ. ಅಧಿಕ ವಾಗಲಿದೆ ಎಂದು ಭೂ ವಿಜ್ಞಾನ ಸಚಿವಾಲಯ ಕಾರ್ಯದರ್ಶಿ ಡಾ.ಮಾಧವನ್ ನಾಯರ್ ರಾಜೀವನ್ ಹೇಳಿದ್ದಾರೆ.
ವಾಯವ್ಯ ಭಾರತ ಮತ್ತು ಮಧ್ಯ ಭಾರತದಲ್ಲಿ ಶೇ.107 ಮತ್ತು ಶೇ. 102 ರಷ್ಟು ಮಳೆಯಾಗಲಿದೆ. ದಕ್ಷಿಣ ಪ್ರಸ್ಥಭೂಮಿಯು ಶೇಕಡಾ 102 ರಷ್ಟು ಮಳೆಯಾದ್ರೆ. ಈಶಾನ್ಯ ಭಾಗದಲ್ಲಿ ಶೇ. 96 ರಷ್ಟು ಮಳೆ ಬೀಳಲಿದೆ ಎಂದು ರಾಜೀವನ್ ಮಾಹಿತಿ ನೀಡಿದ್ದಾರೆ. ಜುಲೈನಲ್ಲಿ ಶೇ.103ರಷ್ಟು ಮಳೆಯಾದರೆ, ಆಗಸ್ಟ್‌ನಲ್ಲಿ ಶೇ. 97ರಷ್ಟು ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಂದಿನ 12 ಗಂಟೆಗಳಲ್ಲಿ ಪೂರ್ವ-ಮಧ್ಯ ಮತ್ತು ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ನಂತರದ 24 ಗಂಟೆಗಳಲ್ಲಿ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತ ಉಂಟಾಗಲಿದೆ. ಇದು ಜೂನ್ 2ರ ಬೆಳಗ್ಗೆ ಉತ್ತರಕ್ಕೆ ಚಲಿಸುವ ಸಾಧ್ಯತೆಯಿದೆ ನಂತರ ಉತ್ತರ-ಈಶಾನ್ಯ ದಿಕ್ಕಿಗೆ ಸಾಗಲಿದೆ ಎಂದು ಸಚಿವಾಲಯ ತಿಳಿಸಿದೆ.