ಕರ್ನಾಟಕ

karnataka

ETV Bharat / bharat

ಜೂನ್ 1ರ ನಂತರ ಕೇರಳಕ್ಕೆ ಎಂಟ್ರಿ ಕೊಡಲಿದೆ ಮಾನ್ಸೂನ್​ - ಮಾನ್ಸೂನ್ ಮಾರುತಗಳು

ಜೂನ್ 5ರ ಒಳಗಾಗಿ ಮಾನ್ಸೂನ್ ಮಾರುತಗಳು ಕೇರಳದ ಕರಾವಳಿ ತಲುಪಲಿದ್ದು, ಜೂನ್ 20ರ ಒಳಗೆ ಮುಂಬೈ ತಲುಪುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.

Monsoon likely to enter Kerala by June 1
ಕೇರಳಕ್ಕೆ ಎಂಟ್ರಿ ಕೊಡಲಿದೆ ಮಾನ್ಸೂನ್

By

Published : May 25, 2020, 3:13 PM IST

ನವದೆಹಲಿ:ಜೂನ್ 1 ಮತ್ತು ಜೂನ್ 5ರ ನಡುವೆ ನೈಋತ್ಯ ಮಾನ್ಸೂನ್ ಮಾರತುಗಳು ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರದ ಮುಖ್ಯಸ್ಥ ರಾಜೇಂದ್ರ ಕುಮಾರ್ ಜೆನಮಣಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜೆನಮಣಿ, ಜೂನ್ 5ರ ಒಳಗಾಗಿ ಮಾನ್ಸೂನ್ ಕೇರಳದ ಕರಾವಳಿ ತಲುಪಲಿದ್ದು, ಜೂನ್ 20ರ ಒಳಗೆ ಮುಂಬೈ ತಲುಪುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಭಾರತವು ಈ ವರ್ಷದ ಗರಿಷ್ಠ ತಾಪಮಾನ ಕಂಡಿದೆ. ಕಳೆದ 2 ದಿನಗಳಲ್ಲಿ 47.6ರಷ್ಟು ತಾಪಮಾನ ದಾಖಲಾಗಿದೆ. ಮೇ 28ರಿಂದ ಶಾಖದ ಅಲೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಭಾರತದ ಉತ್ತರ ಭಾಗಗಳಲ್ಲಿ ಪೂರ್ವ ಗಾಳಿ ಬೀಸುತ್ತಿದ್ದು, ಮೇ 29ರಿಂದ ಗುಡುಗು ಸಹಿತ ಮಳೆಯಾಗಲು ಪ್ರಾರಂಭವಾಗುತ್ತದೆ ಮತ್ತು ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ ಎಂದಿದ್ದಾರೆ.

ABOUT THE AUTHOR

...view details