ಆಂಧ್ರಪ್ರದೇಶ/ಕರ್ನೂಲ್:ಬೇಡ... ಯಾರೂ ಹತ್ತಿರ ಬರ್ಬೇಡಿ, ಅದು ನನ್ನ ಮಗು. ಹೀಗೆ ಆ ತಾಯಿ ಯಾರದ್ದೋ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದಾಳೆ. ಅಲ್ಲದೆ, ಹತ್ತಿರ ಬಂದವರಿಗೆ ಗುರ್ ಎನ್ನುತ್ತಿದ್ದಾಳೆ.
ಕಪಿಚೇಷ್ಟೆಯಲ್ಲ ಪ್ರೀತಿಯ ಪರಾಕಾಷ್ಠೆ... ನಾಯಿಮರಿಯನ್ನು ತನ್ನ ಮರಿಯಂತೆಯೇ ಸಲಹುತ್ತಿದೆ ಈ ಕೋತಿ!
ಮಾತೃ ಹೃದಯವೇ ಹಾಗೇ ತನ್ನದಲ್ಲದ ಮರಿಯನ್ನೂ ಸಹ ತನ್ನ ಮರಿಯಂತೆಯೇ ಪ್ರೀತಿಯಿಂದ ಸಲಹುತ್ತದೆ. ಯಾಕೆ ಈ ಪೀಠಿಕೆ ಅಂತೀರಾ ಈ ಸ್ಟೋರಿ ನೋಡಿ.
ಏನು ವಿಷಯ ಅಂತ ಗೊತ್ತಾಗಿಲ್ಲ ಅಲ್ವ. ಇಲ್ಲಿ ನೋಡಿ ಇದು ಆಂಧ್ರದ ಕರ್ನೂಲ್ ಜಿಲ್ಲೆಯ ಮಡ್ಡಿಕೆರಾ ಉಪನಗರದಲ್ಲಿರುವ ಉದ್ಯಾನದಲ್ಲಿ ನಡಿದಿರೋ ಘಟನೆ. ಇಲ್ಲಿ ಕೋತಿಯೊಂದು ನಾಯಿಮರಿಯೊಂದನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ಸಲಹುತ್ತಿದೆ. ಅದು ಹೋದಲ್ಲೆಲ್ಲಾ ಆ ನಾಯಿ ಮರಿಯನ್ನು ಕೊಂಡೊಯುತ್ತಿದೆ. ಯಾರಾದರೂ ಮರಿಯನ್ನು ಕೊಳ್ಳಲು ಹತ್ತಿರ ಬಂದರೆ ಮರ ಹತ್ತಿ ಕುಳಿತುಕೊಳ್ಳತ್ತಂತೆ.
ಇನ್ನು ಸ್ಥಳೀಯರು ಹಲವು ಬಾರಿ ಆ ನಾಯಿ ಮರಿಯನ್ನು ಕೋತಿಯಿಂದ ಬೇರ್ಪಡಿಸಲು ಪಟ್ಟ ಪ್ರಯತ್ನ ವಿಫಲವಾಗಿದೆ. ನಾಯಿ ಬಳಿ ಯಾರಾದ್ರೂ ಬಂದರೆ ಅವರ ಮೇಲೆ ದಾಳಿ ಮಾಡುತ್ತಿದೆಯಂತೆ. ಕೋತಿ ತನ್ನ ಸ್ವಂತ ಮರಿಯಂತೆಯೇ ನಾಯಿಮರಿಯನ್ನು ನೊಡಿಕೊಳ್ಳುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು.