ಕಾಸರಗೋಡು(ಕೇರಳ):ಎರಡು ಮುಂಗುಸಿಗಳನ್ನು ಕೊಂದ ಕಿಡಿಗೇಡಿಗಳು, ಅದನ್ನು ಮರಕ್ಕೆ ನೇತು ಹಾಕಿರುವ ವಿಲಕ್ಷಣ ಘಟನೆ ಜಿಲ್ಲೆಯ ಕುಂಬದಾಜೆ ಎಂಬಲ್ಲಿ ನಡೆದಿದೆ.
ಇದೆಂಥಾ ಮನಸ್ಥಿತಿ? ಮುಂಗುಸಿಗಳನ್ನು ಕೊಂದು ಮರಕ್ಕೆ ನೇಣು ಹಾಕಿ ವಿಕೃತಿ! - Cruelty to animals in Kerala
ಕೆಲ ದಿನಗಳ ಹಿಂದಷ್ಟೇ ಕೇರಳದ ತಿರುವನಂತಪುರಂನಲ್ಲಿ ಗರ್ಭಿಣಿ ಬೆಕ್ಕನ್ನು ಕೊಂದು ಮರಕ್ಕೆ ನೇಣು ಹಾಕಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದಾದ ಬೆನ್ನಲ್ಲೇ ಇದೀಗ ಎರಡು ಮುಂಗುಸಿಗಳನ್ನು ಕೊಂದಿರುವ ಪಾಪಿಗಳು ಅದನ್ನೂ ಮರಕ್ಕೆ ನೇಣು ಹಾಕಿದ್ದಾರೆ.
![ಇದೆಂಥಾ ಮನಸ್ಥಿತಿ? ಮುಂಗುಸಿಗಳನ್ನು ಕೊಂದು ಮರಕ್ಕೆ ನೇಣು ಹಾಕಿ ವಿಕೃತಿ!](https://etvbharatimages.akamaized.net/etvbharat/prod-images/768-512-5092009-thumbnail-3x2-jsfay.jpg)
ಮುಂಗುಸಿಗಳನ್ನು ಕೊಂದು ಮರಕ್ಕೆ ನೇಣು ಹಾಕಿದ ಪಾಪಿಗಳು
ಇಲ್ಲಿನ ಖಾಸಗಿ ವ್ಯಕ್ತಿಗೆ ಸೇರಿದ ಸ್ಥಳವೊಂದರಲ್ಲಿ ಈ ಘಟನೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ತಿರುವನಂತಪುರಂನಲ್ಲಿ ಗರ್ಭಿಣಿ ಬೆಕ್ಕನ್ನು ಕೊಂದು ಇದೇ ರೀತಿ ನೇಣಿಗೆ ಹಾಕಲಾಗಿತ್ತು. ಇದಾದ ಬೆನ್ನಲ್ಲೇ ಮುಂಗುಸಿಗಳನ್ನು ಕೊಂದು ನೇಣು ಹಾಕಿರುವ ಘಟನೆ ಮಾನವನ ಹಿಂಸಾತ್ಮಕ ಮನೋಭಾವದ ಪರಿಯನ್ನು ತೋರಿಸುತ್ತಿದೆ.
ಈ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮುಂಗುಸಿಯ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
TAGGED:
Cruelty to animals in Kerala