ಕರ್ನಾಟಕ

karnataka

ETV Bharat / bharat

ಟ್ರಬಲ್​ ಶೂಟರ್​ಗೆ ಇಂದೂ ಸಿಗಲಿಲ್ಲ ಜಾಮೀನು... ಅರ್ಜಿ ವಿಚಾರಣೆ ಅ.17ಕ್ಕೆ ಮುಂದೂಡಿಕೆ! - ಡಿಕೆಶಿ ಜಾಮೀನು ಅರ್ಜಿ ವಿಚಾರಣೆ

ಅಕ್ರಮ ಹಣ ವರ್ಗಾವಣೆ ಕೇಸ್​​ನಲ್ಲಿ ತಿಹಾರ್​ ಜೈಲಿನಲ್ಲಿರುವ ಕಾಂಗ್ರೆಸ್​ ಟ್ರಬಲ್​ ಶೂಟರ್​ ಡಿಕೆ ಶಿವಕುಮಾರ್​ಗೆ ಇಂದು ಜಾಮೀನು ಸಿಕ್ಕಿಲ್ಲ. ವಾದ - ಪ್ರತಿವಾದ ಆಲಿಸಿರುವ ದೆಹಲಿ ಹೈಕೋರ್ಟ್​ ವಿಚಾರಣೆ ಮುಂದೂಡಿಕೆ ಮಾಡಿದೆ.

ಮಾಜಿ ಸಚಿವ ಡಿಕೆ ಶಿವಕುಮಾರ್​​​

By

Published : Oct 15, 2019, 5:15 PM IST

ನವದೆಹಲಿ:ಅಕ್ರಮ ಹಣ ವರ್ಗಾವಣೆ ಕೇಸ್​​ನಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನವಾಗಿ ಸದ್ಯ ತಿಹಾರ್​ ಜೈಲಿನಲ್ಲಿರುವ ಕಾಂಗ್ರೆಸ್​ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಡಿಕೆ ಶಿವಕುಮಾರ್​ ಜಾಮೀನು ಅರ್ಜಿ ಇಂದು ದೆಹಲಿ ಹೈಕೋರ್ಟ್​​ನಲ್ಲಿ ನಡೆಯಿತು.

ಡಿಕೆ ಶಿವಕುಮಾರ್​ ಪರ ಮನು ಸಿಂಘ್ವಿ ವಾದ ಮಂಡನೆ ಮಾಡಿದರು. ಇದಾದ ಬಳಿಕ ವಿಚಾರಣೆಯಲ್ಲಿ ಅಕ್ಟೋಬರ್​ 17ಕ್ಕೆ ಮುಂದೂಡಿಕೆ ಮಾಡಿ ಕೋರ್ಟ್​ ಆದೇಶ ಹೊರಡಿಸಿದೆ.

ಈಗಾಗಲೇ ಇಡಿ ವಿಶೇಷ ನ್ಯಾಯಾಲಯ ಇನ್ನು 10 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಅ. 25ರವರೆಗೆ ಡಿಕೆಶಿ ಇಡಿ ವಶದಲ್ಲಿರಲಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಸೋಮವಾರ ಸಮನ್ಸ್ ಜಾರಿ ಮಾಡಿದೆ.

ABOUT THE AUTHOR

...view details