ನವದೆಹಲಿ/ಗಾಜಿಯಾಬಾದ್:ಕೊರೊನಾ ಸೋಂಕು ಹಿನ್ನೆಲೆ ಗಾಜಿಯಾಬಾದ್ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿರುವ ತಬ್ಲೀಘಿ ಜಮಾತ್ ಗೆ ತೆರಳಿ ವಾಪಸಾಗಿದ್ದ ಸೋಂಕಿತರು ಆಸ್ಪತ್ರೆಯ ನರ್ಸ್ಗಳಿಗೆ ಕಿರುಕುಳ ನೀಡಿದ್ದಾರೆ.
ಕ್ವಾರಂಟೈನ್ನಲ್ಲಿರುವ ರೋಗಿಗಳಿಂದ ನರ್ಸ್ಗಳಿಗೆ ಕಿರುಕುಳ ಈ ಹಿನ್ನೆಲೆ ರೋಗಿಗಳ ವಿರುದ್ಧ ದೂರು ದಾಖಲಾಗಿರುವುದಾಗಿ ಎಸ್ಎಸ್ಪಿ ಕಲಾನಿಧಿ ನೈಥಾನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಪ್ರಕರಣ ತುಂಬಾ ಗಂಭೀರವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಎಸ್ಪಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಸೆಕ್ಷನ್ 354, 294, 509, 269, 270, 271 ಅಡಿ ಕೇಸ್ ದಾಖಲಾಗಿದೆ.
ಪ್ರಾಥಮಿಕ ತನಿಖೆ ನಡೆದಿದ್ದು, ಈಗಾಗಲೇ ಆರೋಪಿಗಳ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.