ಅಯೋಧ್ಯೆ :ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿದ ಬಳಿಕ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿದರು. ಇವತ್ತಿನ ಈ ಕ್ಷಣ ಆನಂದದ ಕ್ಷಣ ಎಂದರು. ರಾಮ ಮಂದಿರ ನಿರ್ಮಾಣಕ್ಕೆ 20 ರಿಂದ 30 ವರ್ಷಗಳ ಕಾಲ ಶ್ರಮಪಡಬೇಕು ಎಂದು ಅಂದು ಆರ್ಎಸ್ಎಸ್ ಮುಖ್ಯಸ್ಥರಾಗಿದ್ದ ದೇವವ್ರತ ಹೇಳಿದ್ದರು. ದೇವವ್ರತ ಅವರ ಅಭಿಪ್ರಾಯದಂತೆ 30ನೇ ವರ್ಷದ ಆರಂಭದಲ್ಲೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದರು.
ದಶಕಗಳ ಕನಸು ನನಸಾಗಿದ್ದಕ್ಕೆ ಇಡೀ ದೇಶವೇ ಆನಂದದ ಕಡಲಲ್ಲಿ ತೇಲುತ್ತಿದೆ: ಮೋಹನ್ ಭಾಗವತ್ - ramamandir pujna
ಮೂವತ್ತು ವರ್ಷಗಳ ಶ್ರಮದ ಫಲ ಇವತ್ತು ನಮಗೆ ಸಿಕ್ಕಿದೆ. ಮಂದಿರ ನಿರ್ಮಾಣಕ್ಕಾಗಿ ಸಾವಿರಾರು ಮಂದಿ ಪ್ರಾಣಾರ್ಪಣೆ ಮಾಡಿದ್ದಾರೆ. ಇವತ್ತು ನಮ್ಮ ಸಂಕಲ್ಪ ಪೂರ್ಣವಾಗಿದೆ..
''ಮೂವತ್ತು ವರ್ಷಗಳ ಶ್ರಮದ ಫಲ ಇವತ್ತು ನಮಗೆ ಸಿಕ್ಕಿದೆ. ಮಂದಿರ ನಿರ್ಮಾಣಕ್ಕಾಗಿ ಸಾವಿರಾರು ಮಂದಿ ಪ್ರಾಣಾರ್ಪಣೆ ಮಾಡಿದ್ದಾರೆ. ಇವತ್ತು ನಮ್ಮ ಸಂಕಲ್ಪ ಪೂರ್ಣವಾಗಿದೆ. ಈಗ ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಲಿದೆ'' ಎಂದು ಮೋಹನ್ ಭಾಗವತ್ ಹೇಳಿದರು. ''ದಶಕಗಳ ಕನಸು ನನಸಾಗಿದ್ದಕ್ಕೆ ಇಡೀ ದೇಶವೇ ಇವತ್ತು ಆನಂದದ ಕಡಲಲ್ಲಿ ತೇಲುತ್ತಿದೆ'' ಎಂದರು.
ಮಹಾಮಾರಿ ಕೊರೊನಾದಿಂದಾಗಿ ಈ ಕಾರ್ಯಕ್ರಮಕ್ಕೆ ಹಲವರಿಗೆ ಬರಲು ಸಾಧ್ಯವಾಗಿಲ್ಲ. ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿಯವರಿಗೂ ಬರಲಾಗಲಿಲ್ಲ ಎಂದರು. 'ಆತ್ಮ ನಿರ್ಭರ' ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಮಹಾಮಾರಿ ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳಲು ಇಡೀ ವಿಶ್ವ ಹೊಸ ಹೊಸ ಮಾರ್ಗೋಪಾಯಗಳನ್ನು ಹುಡುಕುತ್ತಿದೆ ಎಂದು ಹೇಳಿದರು.