ಹೈದರಾಬಾದ್: ಪ್ರಧಾನಿನರೇಂದ್ರ ಮೋದಿ ಓರ್ವ ಪ್ರಭಾವಿ ಭಾಷಣಕಾರ ಅಂತಾ ಎಲ್ಲರಿಗೂ ತಿಳಿದಿದೆ. ಇದರೊಂದಿಗೆ ಮೋದಿ ಓರ್ವ ಕವಿ ಕೂಡಾ ಹೌದು. ನಿನ್ನೆ ಮಹಾಬಲಿಪುರಂ ಸಮುದ್ರ ತೀರದಲ್ಲಿ ಬೆಳಗಿನ ವಾತಾವರಣ ಆಸ್ವಾದಿಸಿದ ಅವರು, ಸಾಗರದ ಬಗ್ಗೆ ಕವನವೊಂದನ್ನು ರಚಿಸಿದ್ದಾರೆ.
ತಾವು ಸಾಗರದ ವರ್ಣನೆ ಮಾಡಿ ಬರೆದಿರುವ ಕವನವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಸ್ವತಃ ಪ್ರಧಾನಿ ಮೋದಿ ಶೇರ್ ಮಾಡಿಕೊಂಡಿದ್ದಾರೆ.
ಕವನದ ಮೂಲಕ ಸಾಗರಕ್ಕೆ ಮೋದಿ ಪ್ರಣಾಮ ತಮ್ಮ ಕವನದ ಬಗ್ಗೆ ಹೇಳಿಕೊಂಡಿರುವ ಮೋದಿ, ನಿನ್ನೆ ನಾನು ಮಹಾಬಲಿಪುರಂ ಸಮುದ್ರ ತೀರದಲ್ಲಿ ಸಾಗುತ್ತಿರುವಾಗ ಸಾಗರದ ಅಲೆಗಳ ಜೊತೆಗೆ ಸಂವಾದ ನಡೆಸುತ್ತಾ ನಾನು ಲೋಕವನ್ನೇ ಮರೆತೆ. ಆ ಸಂವಾದ ನನ್ನ ಭಾವನೆಗಳನ್ನು ಸೇರಿತು. ನನ್ನ ಭಾವ ಸಂವಾದವನ್ನು ಅಕ್ಷರ ರೂಪಕ್ಕಿಳಿಸಿ ನಿಮ್ಮ ಮುಂದಿಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನು ತಮ್ಮ ಕವನದುದ್ದಕ್ಕೂ ಸಾಗರವನ್ನು ವರ್ಣಿಸಿರುವ ಮೋದಿ, ನಿನಗೆ ನನ್ನ ಪ್ರಣಾಮಗಳು ಎಂದು ಹೇಳಿದ್ದಾರೆ.