ನವದೆಹಲಿ: ಜನವರಿ 15 ಮತ್ತು 16 ರಂದು ನಡೆಯಲಿರುವ ಸ್ಟಾರ್ಟ್‌ಅಪ್ ಇಂಡಿಯಾ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ಕರೆ ನೀಡಿದ್ದಾರೆ.
ಹೆಚ್ಚಿನ ಕಾರ್ಯಕ್ರಮಗಳು ವರ್ಚುವಲ್ ಆಗಿ ನಡೆಯುತ್ತಿರುವುದರಿಂದ, ಯುವಕರಿಗೆ ಅನೇಕ ಆಸಕ್ತಿದಾಯಕ ದೇಶೀಯ ಮತ್ತು ಜಾಗತಿಕ ವೇದಿಕೆಗಳ ಭಾಗವಾಗಲು ಇದು ಉತ್ತಮ ಅವಕಾಶವನ್ನು ನೀಡಿದೆ. ಅಂತಹ ಒಂದು ಅವಕಾಶವು ಜನವರಿ 15 ಮತ್ತು 16 ರಂದು ದೊರೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಂದು ನಾನು ನಮ್ಮ ಯುವಕರನ್ನು ಕೋರುತ್ತೇನೆ ಎಂದು ಹೇಳಿದ್ದಾರೆ.
ಕೊರೊನಾ ಲಾಕ್ಡೌನ್ ವೇಳೆ ವಿಜ್ಞಾನಿಗಳು, ವೈದ್ಯಕೀಯ ವೃತ್ತಿಪರರು, ಕೊರೊನಾ ವಾರಿಯರ್ಸ್, ಶಿಕ್ಷಣ ತಜ್ಞರು, ಉದ್ಯಮದ ಮುಖಂಡರು, ಯುವ ನಾವೀನ್ಯಕಾರರು, ಆಧ್ಯಾತ್ಮಿಕ ನಾಯಕರು ಮತ್ತು ಹೆಚ್ಚಿನವರೊಂದಿಗೆ ಸಂವಹನ ನಡೆಸಲಾಯಿತು. ವರ್ಚುವಲ್ ಶೃಂಗ ಸಭೆಗಳು, ದ್ವಿಪಕ್ಷೀಯ ಮತ್ತು ವಿಶ್ವ ನಾಯಕರೊಂದಿಗೆ ಬಹುಪಕ್ಷೀಯ ಮಾತುಕತೆಗಳು ನಡೆದವು. ಡಿಜಿಟಲ್ ರೀತಿಯಲ್ಲಿ ಆಯೋಜಿಸಲಾದ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಾಯಿತು. ನಾನು ಅಸ್ತಿತ್ವದಲ್ಲಿರುವ ಸರ್ಕಾರಿ ಯೋಜನೆಗಳ ಲಕ್ಷಾಂತರ ಫಲಾನುಭವಿಗಳೊಂದಿಗೆ ಸಂವಹನ ನಡೆಸಿದ್ದೇನೆ. ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನ ವಿರೋಧಿಸಿ ರಾಜೀನಾಮೆಗೆ ಮುಂದಾದ ಲೋಕದಳ ಶಾಸಕ