ನವದೆಹಲಿ:ಕಳೆದ 5 ದಿನಗಳ ಕಾಲ ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಇಂದು ಬೆಳಗ್ಗೆ ಭಾರತಕ್ಕೆ ವಾಪಸ್ ಆಗಿದ್ದಾರೆ.
ಆಗಸ್ಟ್ 22 ರಂದು ಪ್ಯಾರಿಸ್ಗೆ ಭೇಟಿ ನೀಡಿದ್ದ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಕೆಲ ಒಪ್ಪಂದಗಳು ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಆಗಸ್ಟ್ 23 ರಂದು ಯುಎಇಗೆ ಭೇಟಿ ನೀಡಿದ ಮೋದಿಗೆ ಯುಎಇ ರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 'ಆರ್ಡರ್ ಆಫ್ ಜಾಯೆದ್' ಪ್ರಶಸ್ತಿ ಪ್ರದಾನ ಮಾಡಿದರು. ಉಭಯ ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆ ಕೂಡ ನಡೆಯಿತು.
ನಂತರ ಮೋದಿ ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತದಲ್ಲಿ ಬಹ್ರೇನ್ಗೆ ಭೇಟಿ ನೀಡಿದರು. ಆಗಸ್ಟ್ 25 ರಂದು ಬಹ್ರೇನ್ನಲ್ಲಿ ಮೋದಿಗೆ 'ದಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರೆನೈಸನ್ಸ್' ಪ್ರದಾನ ಮಾಡಿ ಗೌರವಿಸಲಾಯಿತು.
ಬಹ್ರೇನ್ನಿಂದ ಫ್ರಾನ್ಸ್ಗೆ ಭೇಟಿ ನೀಡಿದ ಮೋದಿ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಕೂಡ ಮಾತುಕತೆ ನಡೆಸಿ ಇಂದು ತವರಿಗೆ ಮರಳಿದ್ದಾರೆ.