ನವದೆಹಲಿ: ಬಿಜೆಪಿಯ 40 ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಶ್ರಮಿಸಿದ ಎಲ್ಲರಿಗೂ ಧುರೀಣರಿಗೆ ಗೌರವ ಸೂಚಿಸಿದ್ದಾರೆ. ಪಕ್ಷವು ದೇಶದ ಜನತೆಗೆ ಒಳ್ಳೆಯ ಆಡಳಿತ ನೀಡಲು, ಬಡವರ ಸಬಲೀಕರಣಕ್ಕೆ ದುಡಿಯುತ್ತಿದೆ. ಪಕ್ಷದ ಕಾರ್ಯಕರ್ತರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಾಗಿ ಶ್ರಮಿಸುತ್ತಿದ್ದಾರೆ ಎಂದಿದ್ದಾರೆ.
ಬಿಜೆಪಿ ಕಾರ್ಯಕರ್ತರು ಕೊರೊನಾ ಮುಕ್ತ ಭಾರತಕ್ಕೆ ಶ್ರಮಿಸಬೇಕು: ಮೋದಿ ಟ್ವೀಟ್ - ಬಿಜೆಪಿ
ಇಂದು ಬಿಜೆಪಿ ಪಕ್ಷದ 40 ವರ್ಷದ ಸಂಸ್ಥಾಪನಾ ದಿನ. ಈ ವೇಳೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಪಕ್ಷದ ಧುರೀಣರಿಗೆ ಗೌರವ ಸೂಚಿಸಿ, ಕಾರ್ಯಕರ್ತರು ಕೊರೊನಾ ವಿರುದ್ಧ ಹೋರಾಡಲು ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ
ಮತ್ತೊಂದು ಟ್ವೀಟ್ನಲ್ಲಿ ದೇಶ ಕೋವಿಡ್-19ನೊಂದಿಗೆ ಹೋರಾಡುತ್ತಿರುವಾಗ ಪಕ್ಷದ 40ನೇ ವರ್ಷದ ಸಂಸ್ಥಾಪನಾ ದಿನ ಬಂದಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ನೀಡಿರುವ ಕೊರೊನಾ ಕುರಿತ ನಿರ್ದೇಶನಗಳನ್ನು ಪಾಲಿಸಬೇಕು ಹಾಗೂ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಲು ಸಹಕರಿಸಿ, ದೇಶವನ್ನು ಕೊರೊನಾ ಮುಕ್ತ ಮಾಡುವಲ್ಲಿ ಶ್ರಮಿಸಬೇಕು ಎಂದು ಕರೆ ಕೊಟ್ಟಿದ್ದಾರೆ.