ನವದೆಹಲಿ:ಭಾರತೀಯ ವಿದೇಶಿ ಸೇವಾ ದಿನದ ಅಂಗವಾಗಿ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
ಭಾರತೀಯ ವಿದೇಶಿ ಸೇವಾ ದಿನ: ಐಎಫ್ಎಸ್ ಅಧಿಕಾರಿಗಳ ಕಾರ್ಯಕ್ಕೆ ಮೋದಿ ಮೆಚ್ಚುಗೆ - ವಿದೇಶಾಂಗ ಸೇವಾ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ
ರಾಷ್ಟ್ರ ಸೇವೆ ಮತ್ತು ಜಾಗತಿಕ ಮಟ್ಟದಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಐಎಫ್ಎಸ್ ಅಧಿಕಾರಿಗಳು ಮಾಡಿದ ಕಾರ್ಯ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅಂತಾರಾಷ್ಟ್ರೀಯ ಪ್ರಯಾಣ ಸ್ಥಗಿತಗೊಂಡಿದ್ದರಿಂದ ವಿದೇಶದಿಂದ ಭಾರತೀಯರನ್ನು ದೇಶಕ್ಕೆ ಕರೆತರಲು ಪ್ರಾರಂಭಿಸಲಾದ ವಂದೇ ಭಾರತ್ ಮಿಷನ್ ಸಂದರ್ಭದಲ್ಲಿ ಅವರ ಪ್ರಯತ್ನಗಳು ಗಮನಾರ್ಹವಾಗಿವೆ. ನಮ್ಮ ನಾಗರಿಕರು ಮತ್ತು ಇತರ ರಾಷ್ಟ್ರಗಳಿಗೆ ಸಂಬಂಧಿಸಿದ ಸಹಾಯಗಳ ಕಾರ್ಯಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಐಎಫ್‌ಎಸ್ ದಿನದಂದು ಎಲ್ಲಾ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಗಳಿಗೆ ಶುಭಾಶಯಗಳು. ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದರಲ್ಲಿ ಅಧಿಕಾರಿಗಳು ಮಾಡಿದ ಕಾರ್ಯಗಳು ಗಮನಾರ್ಹವಾಗಿವೆ. ಜಾಗತಿಕವಾಗಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೆಚ್ಚಿಸುವ ಕೆಲಸ ಮೆಚ್ಚುವಂತದ್ದು. ವಂದೇ ಭಾರತ್ ಮಿಷನ್ ಮತ್ತು ನಮ್ಮ ನಾಗರಿಕರಿಗೆ ಮತ್ತು ಇತರ ಕೋವಿಡ್ ಸಂಬಂಧಿತ ಸಹಾಯದ ಸಮಯದಲ್ಲಿ ಅವರು ಮಾಡಿದ ಪ್ರಯತ್ನಗಳು ಶ್ಲಾಘನೀಯ" ಎಂದಿದ್ದಾರೆ.