ನವದೆಹಲಿ:ಸದಾ ಒಂದಿಲ್ಲೊಂದು ವಿಷಯಗಳಿನ್ನಿಟ್ಟುಕೊಂಡು ಭಾರತೀಯ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಪಾಕ್ಗೆ ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಖತ್ ಆಗಿ ಟಾಂಗ್ ನೀಡಿದ್ದಾರೆ.
ನರೇಂದ್ರ ಮೋದಿ ನನಗೂ ಕೂಡ ಪ್ರಧಾನಿಯೇ... ಪಾಕ್ ಸಚಿವನಿಗೆ ಕೇಜ್ರಿವಾಲ್ ತಿರುಗೇಟು!
ಪಾಕಿಸ್ತಾನದ ಸಚಿವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಖತ್ ಆಗಿ ತಿರುಗೇಟು ನೀಡಿದ್ದು, ಅವರ ಟ್ವೀಟ್ಗೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಟ್ವೀಟ್ ಮಾಡಿ, ಭಾರತೀಯರು ಸೇರಿ ಮೋದಿಯನ್ನು ಸೋಲಿಸಬೇಕು.ಒತ್ತಡದಲ್ಲಿರುವ ಅವರು ಈಗಾಗಲೇ ದೆಹಲಿ ಚುನಾವಣೆಯಲ್ಲಿ ಸೋಲು ಕಾಣುವ ಭೀತಿಯಲ್ಲಿದ್ದಾರೆ. ಕಾಶ್ಮೀರ ವಿಚಾರ ಹಾಗೂ ನಾಗರೀಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಾಗೂ ದೇಶದ ಆರ್ಥಿಕತೆ ಕುಸಿತದ ಬಳಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕೇಜ್ರಿವಾಲ್, ನರೇಂದ್ರ ಮೋದಿ ಜೀ ಭಾರತದ ಪ್ರಧಾನ ಮಂತ್ರಿ, ನನಗೂ ಕೂಡ ಪ್ರಧಾನಮಂತ್ರಿ. ದೆಹಲಿ ಚುನಾವಣೆ ಭಾರತದ ಆತಂರಿಕ ವಿಷಯ. ಭಯೋತ್ಪಾದನೆಗೆ ಸಹಾಯಹಸ್ತ ನೀಡುವ ದೇಶ ಭಾರತದ ಆತಂರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ನಾವು ಸಹಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿರುವ ಟ್ವೀಟ್ಗೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕೇಜ್ರಿವಾಲ್ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಫೆ.8ರಂದು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, 11ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ.