ಥಿಂಪು (ಭೂತಾನ್):ಪ್ರಧಾನಿ ನರೇಂದ್ರ ಮೋದಿ ನೆರೆಯ ಭೂತಾನ್ ಪ್ರವಾಸದಲ್ಲಿದ್ದು ಉಭಯ ದೇಶಗಳ ನಡುವೆ ಆರೋಗ್ಯ, ವಿದ್ಯುತ್, ಬಾಹ್ಯಾಕಾಶ ಉಪಗ್ರಹ, ಜ್ಞಾನ, ರುಪೇ ಕಾರ್ಡ್‌ಗಳ ಬಳಕೆ ಸೇರಿದಂತೆ ಒಂಬತ್ತು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಇದೇ ವೇಳೆ ಪ್ರಧಾನಿ ಮೋದಿ ಮತ್ತು ಭೂತಾನ್ ಪ್ರಧಾನಿ ಲೋಟೇ ಶೆರಿಂಗ್ ಇಸ್ರೋ ಗ್ರೌಂಡ್ ಸ್ಟೇಷನ್, ಜಲವಿದ್ಯುತ್ ಯೋಜನೆ ಸೇರಿದಂತೆ 5 ಮಹತ್ವಾಕಾಂಕ್ಷಿ ಯೋಜನೆಗಳನ್ನು ಉದ್ಘಾಟಿಸಿದರು.
ಭೂತಾನ್‌ನ ಭಾರತದ ರಾಯಭಾರಿ ರುಚಿರಾ ಕಾಂಬೋಜ್ ಮಾತನಾಡಿ, ಇಸ್ರೋ ಗ್ರೌಂಡ್ ಸ್ಟೇಷನ್ ಉದ್ಘಾಟನೆಯಿಂದಾಗಿ ಸಂವಹನ, ಪ್ರಸಾರ ಮತ್ತು ವಿಪತ್ತು ನಿರ್ವಹಣಾ ಕ್ಷೇತ್ರಗಳ ವಿಷಯಗಳಿಗೆ ಸಂಭಂದಿಸಿದಂತೆ ಭೂತಾನ್ಗೆ ಭಾರಿ ಪ್ರಯೋಜನವಾಗಲಿದೆ ಎಂದರು.
ಇದು ಭಾರತದ ರಿಮೋಟ್ ಸೆನ್ಸಿಂಗ್ ಉಪಗ್ರಹದಿಂದ ಡೇಟಾವನ್ನು ವಿಶ್ಲೇಷಿಸಲು ಭೂತಾನ್ಗೆ ಸಹಕಾರಿಯಾಗಲಿದ್ದು, ಭೂತಾನ್ ತರಬೇತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ತಿಳಿಸಿದರು.
ಈ ಗ್ರೌಂಡ್ ಸ್ಟೇಷನ್ ಮೂಲಕ ನೆರೆ ದೇಶಗಳಾದ ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ದೇಶಗಳಲ್ಲಿ ಹೆಚ್ಚುತ್ತಿರುವ ದೂರಸಂಪರ್ಕ ಮತ್ತು ಪ್ರಸಾರ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.