ಕರ್ನಾಟಕ

karnataka

ETV Bharat / bharat

ಫ್ರಾನ್ಸ್​ನಲ್ಲಿ ಪ್ರಧಾನಿ ಮೋದಿ.. ಅಧ್ಯಕ್ಷ ಇಮಾನ್ಯುವಲ್​ ಜೊತೆ ಮಾತುಕತೆ

ಉಭಯ ದೇಶಗಳ ನಡುವಿನ ಸಂಬಂಧವನ್ನು ದೃಢಪಡಿಸುವ ಜೊತೆಗೆ ಭಾರತದಲ್ಲಿ ಹೂಡಿಕೆ ಮಾಡಲು ಫ್ರಾನ್ಸ್​ಅನ್ನು ಮೋದಿ ಅವರು ಆಹ್ವಾನಿಸಲಿದ್ದಾರೆ.

ಫ್ರಾನ್ಸ್​ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ

By

Published : Aug 22, 2019, 10:33 PM IST

ಪ್ಯಾರಿಸ್​:ದ್ವಿಪಕ್ಷೀಯ ಮಾತುಕತೆಗಾಗಿ ಫ್ರಾನ್ಸ್​ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಅಧ್ಯಕ್ಷ ಇಮಾನ್ಯುವಲ್​ ಮಾರ್ಕೊ​ ಅವರನ್ನು ಭೇಟಿಯಾಗಿದ್ದಾರೆ.

ಉಭಯ ದೇಶಗಳ ನಡುವಿನ ಸಂಬಂಧವನ್ನು ದೃಢಪಡಿಸುವ ಜೊತೆಗೆ ಭಾರತದಲ್ಲಿ ಹೂಡಿಕೆ ಮಾಡಲು ಫ್ರಾನ್ಸ್​ಅನ್ನು ಮೋದಿ ಅವರು ಆಹ್ವಾನಿಸಲಿದ್ದಾರೆ.

ಪ್ಯಾರಿಸ್​ನ ಚಾರ್ಲ್ಸ್​ ಡೆ ಗುಲ್​ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಅವರನ್ನು ಅಲ್ಲಿನ ಅಧಿಕಾರಿಗಳು ಹೂಗುಚ್ಚ ನೀಡಿ ಸ್ವಾಗತಿಸಿದರು.

ಫ್ರಾನ್ಸ್​ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರೂ ಕೂಡ ಮೋದಿ ಅವರಿಗೆ ಗ್ರೀಟ್​ ಮಾಡಿದ್ದಾರೆ.

ABOUT THE AUTHOR

...view details