ನವದೆಹಲಿ:ಲಡಾಖ್ ಗಡಿ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 22 ಯೋಧರು ಹುತಾತ್ಮರಾಗಿದ್ದು, ಇದಾದ ಬಳಿಕ ಉಭಯ ದೇಶಗಳ ನಡುವೆ ರಾಜಕೀಯ ಹೋರಾಟ ಮುಂದುವರೆದಿದೆ. ಇದೀಗ ಪ್ರಧಾನಿ ಮೋದಿ ಕೂಡ ಚೀನಾಗೆ ಕಠಿಣ ಸಂದೇಶ ರವಾನೆ ಮಾಡಿದ್ದಾರೆ.
'ವೇಬೋ' ಅಕೌಂಟ್ ಡಿಲೀಟ್ ಮಾಡಿದ ಪಿಎಂ... ವೈಯಕ್ತಿಕವಾಗಿ ಚೀನಾಗೆ ನಮೋ ಕಠಿಣ ಸಂದೇಶ ಎಂದ ಬಿಜೆಪಿ!
ಚೀನಾದ 59 ಆ್ಯಪ್ ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರ ಮೇಲಿಂದ ಮೇಲೆ ಶಾಕ್ ನೀಡುತ್ತಿದ್ದು, ಇದೀಗ ಪ್ರಧಾನಿ ಮೋದಿ ಬಳಕೆ ಮಾಡುತ್ತಿದ್ದ ವೇಬೋ ಅಕೌಂಟ್ ಕೂಡ ಡಿಲೀಟ್ ಮಾಡಿದ್ದಾರೆ.
ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಭಾರತ ಈಗಾಗಲೇ ಟಿಕ್ ಟಾಕ್ ಸೇರಿದಂತೆ ಚೀನಾದ 59 ಆ್ಯಪ್ ಬ್ಯಾನ್ ಮಾಡಿದ್ದು, ಇದರ ಬೆನ್ನಲ್ಲೇ ಚೀನಾದ ಸೋಷಿಯಲ್ ಮೀಡಿಯಾ ಆ್ಯಪ್ ವೇಬೋ ಅಕೌಂಟ್ ಡಿಲೀಟ್ ಮಾಡಿದ್ದಾರೆ. ಅದರಲ್ಲಿ ಪ್ರಧಾನಿ ಮೋದಿ 2.44 ಫಾಲೋವರ್ಸ್ ಹೊಂದಿದ್ದರು. 2015ರಲ್ಲಿ ಈ ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್ ಓಪನ್ ಮಾಡಿದ್ದ ನಮೋ, ಇಲ್ಲಿಯವರೆಗೆ 115 ಪೋಸ್ಟ್ ಮಾಡಿದ್ದಾರೆ. ವಿಶೇಷವೆಂದರೆ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆಗಿನ ಫೋಟೋ ಸೇರಿದಂತೆ ಎರಡು ಪೋಸ್ಟ್ ಸಹ ಇದರಲ್ಲಿದ್ದವು.
ಇದೇ ವಿಷಯವಾಗಿ ಇದೀಗ ಮಾತನಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಈ ಆ್ಯಪ್ ಡಿಲೀಟ್ ಮಾಡುವ ಮೂಲಕ ಚೀನಾಗೆ ನಮೋ ವೈಯಕ್ತಿಕವಾಗಿ ಕಠಿಣ ಸಂದೇಶ ರವಾನೆ ಮಾಡಿದ್ದಾರೆ ಎಂದಿದ್ದಾರೆ.