ನವದೆಹಲಿ:ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವೆಗಳ ನೇಮಕಕ್ಕೆ 2019ರಲ್ಲಿ ನಡೆಸಿದ್ದ ಅಂತಿಮ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಪ್ರದೀಪ್ ಸಿಂಗ್ ಮೊದಲ ಸ್ಥಾನ ಪಡೆದಿದ್ದು, ಜತಿನ್ ಕಿಶೋರ್ ಮತ್ತು ಪ್ರತಿಭಾ ವರ್ಮಾ ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಯುಪಿಎಸ್‌ಸಿ ಫಲಿತಾಂಶ ಪ್ರಕಟ... ಪ್ರದೀಪ್ ಸಿಂಗ್, ಪ್ರತಿಭಾ ವರ್ಮಾ ಟಾಪರ್
ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮೋದಿ ಸಾಧಕರನ್ನು ಅಭಿನಂದಿಸಿ, ಆಯ್ಕೆ ಆಗದವರಿಗೆ ಧೈರ್ಯ ತುಂಬಿ ಟ್ವೀಟ್ ಮಾಡಿದ್ದಾರೆ.
2019ರ ಸಿವಿಲ್ ಪರೀಕ್ಷೆ ಯಶಸ್ವಿಯಾಗಿ ತೇರ್ಗಡೆ ಮಾಡಿರುವ ಎಲ್ಲ ಯುವಕ-ಯುವತಿಯರಿಗೆ ಅಭಿನಂದನೆಗಳು. ಸಾರ್ವಜನಿಕ ನಾಗರಿಕ ವೃತ್ತಿ ನಿಮಗಾಗಿ ಕಾಯುತ್ತಿದೆ ಎಂದಿದ್ದಾರೆ.
2019ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ನಿರೀಕ್ಷಿಸಿದ ರೀತಿಯಲ್ಲಿ ಫಲಿತಾಂಶ ಪಡೆಯದವರಿಗೆ ಜೀವನದಲ್ಲಿ ಹಲವಾರು ಅವಕಾಶಗಳಿವೆ. ಪ್ರತಿಯೊಬ್ಬರೂ ಕಠಿಣ ಪರಿಶ್ರಮಿಗಳು ಎಂದು ತಿಳಿಸಿದ್ದಾರೆ.