ಲೋಕಸಭೆ ಚುನಾವಣೆ ಶುರುವಾಗುವ ದಿನವೇ (ಏಪ್ರಿಲ್ 11) ಪ್ರಧಾನಿ ಮೋದಿ ಅವರ ಚಿತ್ರ ವಿಶ್ವದಾದ್ಯಂತ ಬಿಡುಗಡೆ ಮಾಡಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ. ಈ ಮಧ್ಯೆ ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರವನ್ನು ವಿಶ್ವದ 38 ದೇಶಗಳ ಬೆೆಳ್ಳಿಪರದೆಗಳಲ್ಲಿ ರಿಲೀಸ್ ಮಾಡಲಾಗುವುದು ಎಂದು ಚಿತ್ರ ನಿರ್ಮಾಪಕ ಆನಂದ್ ಪಂಡಿತ್ ತಿಳಿಸಿದ್ದಾರೆ.
ಮೋದಿ ಜೀವನಾಧಾರಿತ ಚಿತ್ರ 38 ದೇಶಗಳಲ್ಲಿ ಏಪ್ರಿಲ್ 11ಕ್ಕೆ ರಿಲೀಸ್! - Etv Bharat
ಲೋಕಸಭೆ ಚುನಾವಣೆ ಶುರುವಾಗುವ ದಿನವೇ (ಏಪ್ರಿಲ್ 11) ಪ್ರಧಾನಿ ಮೋದಿ ಅವರ ಚಿತ್ರ ವಿಶ್ವದಾದ್ಯಂತ ಬಿಡುಗಡೆ ಮಾಡಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ.
![ಮೋದಿ ಜೀವನಾಧಾರಿತ ಚಿತ್ರ 38 ದೇಶಗಳಲ್ಲಿ ಏಪ್ರಿಲ್ 11ಕ್ಕೆ ರಿಲೀಸ್!](https://etvbharatimages.akamaized.net/etvbharat/images/768-512-2923897-thumbnail-3x2-nhl.jpg)
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂಗ್ಲೆಂಡ್,ಅಮೆರಿಕ, ಕೆನಡಾ,ಆಸ್ಟ್ರೇಲಿಯಾ ಮತ್ತು ಯುಎಇ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯ ಅಭಿಮಾನಿಗಳಿದ್ದಾರೆ. ಹಾಗಾಗಿ ಈ ದೇಶಗಳೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಮೋದಿ ಚಿತ್ರ ತೆರೆಕಾಣಲಿದೆ. ಮೋದಿ ಬದುಕಿನ ಬಗ್ಗೆ ದೇಶದೊಳಗಷ್ಟೇ ಅಲ್ಲ, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರು-ಭಾರತೀಯೇತರರಿಗೂ ಕುತೂಹಲವಿದೆ. ಹಾಗಾಗಿ ವಿಶ್ವದ ನಾನಾ ಕಡೆ ಚಿತ್ರ ತೆರೆಕಾಣುವುದು ಪಕ್ಕಾ ಆಗಿದೆ. ಮೋದಿ ಚಿತ್ರ ದೇಶದ 1,700 ಮತ್ತು ಜಗತ್ತಿನ ನಾನಾ ಕಡೆ 600 ಬೆಳ್ಳಿ ಪರದೆಗಳಲ್ಲಿ ಮೂಡಿ ಬರಲಿದೆ. ಸದ್ಯಕ್ಕೆ ಚಿತ್ರ ಹಿಂದಿ,ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತೆರೆ ಬರಲಿದೆ.
ಸಾರ್ವತ್ರಿಕ ಚುನಾವಣೆಯ ದಿನದಂದೇ ಚಿತ್ರ ಬಿಡುಗಡೆ ಮಾಡುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಚುನಾವಣೆ ಸಂದರ್ಭದಲ್ಲಿ ಚಿತ್ರ ರಿಲೀಸ್ ಮಾಡಿದರೆ ಮತದಾರರ ಮನಸ್ಸಿನ ಮೇಲೆ ಪ್ರಭಾವ ಉಂಟು ಮಾಡಲಿದೆ ಅಂತ ಕಾಂಗ್ರೆಸ್ ವಕ್ತಾರ ಅಮನ್ ಪನ್ವಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಚಿತ್ರದ ವಿರುದ್ಧ ಕೇಳಿಬಂದಿರುವ ಟೀಕೆಗಳಿಗೆ ಚಿತ್ರ ನಿರ್ಮಾಪಕ ಆನಂದ್ ಪಂಡಿತ್ ವಿವರಣೆ ನೀಡಿದ್ದಾರೆ. ನಾವು ಪ್ರಧಾನಿ ಮೋದಿ ಅವರನ್ನು ವೈಭವೀಕರಿಸುವ ಕೆಲಸ ಮಾಡಿಲ್ಲ, ರಾಜಕಾರಣವನ್ನೇ ಎತ್ತಿ ತೊರಿಸಿಲ್ಲ. ಮೋದಿ ನಡೆದು ಬಂದ ದಾರಿಯನ್ನಷ್ಟೇ ತೆರೆಯ ಮೇಲೆ ತೋರಿಸುವ ಕೆಲಸ ಮಾಡಿದ್ದೇವೆ ಎಂದಿದ್ದಾರೆ.