ಕಳೆದ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಹಲವಾರು ಮಹತ್ವದ ನಿರ್ಧಾರ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಪೈಕಿ ಮುಖ್ಯವಾದವು ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ, ಇಡೀ ರಾಜ್ಯವನ್ನು ಜಮ್ಮು ಹಾಗೂ ಕಾಶ್ಮೀರ ಹಾಗೂ ಲಡಾಖ್‍ಗಳೆಂಬ ಕೇಂದ್ರಾಡಳಿತ ಪ್ರದೇಶಗಳಾಗಿ ಆಗಸ್ಟ್ 2019 ರಲ್ಲಿ ವಿಭಜಿಸಲಾಯಿತು. ಉಳಿದಂತೆ ದೇಶದ ಬೆನ್ನೆಲುಬಾಗಿರುವ ರೈತರ ಹಾಗೂ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಬಲವರ್ಧನೆಗೆ ಕೂಡಾ ನಾನಾ ಉಪ ಕ್ರಮಗಳನ್ನು ಕಳೆದೊಂದು ವರ್ಷದಿಂದ ತೆಗೆದುಕೊಳ್ಳಲಾಗಿದೆ.
ಈ ಪೈಕಿ ಮುಖ್ಯವಾದುವುಗಳೆಂದರೆ, 2022ರ ವೇಳೆಗೆ ರೈತರ ಅದಾಯ ದ್ವಿಗುಣಗೊಳಿಸುವ ಸಂಬಂಧ, ಅಂತರ್ ಸಚಿವಾಲಯಗಳ ಸಚಿವರು ಚಿಂತನೆ ನಡೆಸಿದ್ದು, ರೈತರ 7 ಆದಾಯ ಮೂಲಗಳ ಮೂಲಕ ಅವರ ಆದಾಯ ದ್ವಿಗುಣಗೊಳಿಸುವ ಚಿಂತನೆ ನಡೆದಿದೆ.10,000 ಕ್ಕೂ ಅಧಿಕ ರೈತರ ಉತ್ಪನ್ನ ಗುಂಪುಗಳನ್ನು ಹಾಗೂ 500 ಮೀನುಗಾರಿಕಾ ಉತ್ಪನ್ನ ಗುಂಪುಗಳಿಗೆ ಬೆಂಬಲ ಕಾರ್ಯಕ್ರಮ ರೂಪಿಸಲಾಗಿದೆ. ಕೃಷಿ ಕ್ಷೇತ್ರದ ಆಧುನೀಕರಣಕ್ಕೆ ಸಂಬಂಧಿಸಿದಂತೆ ಮಾದರಿ ಲ್ಯಾಂಡ್ ಲೀಸ್ ಕಾಯ್ದೆ 2016, ಮಾದರಿ ಎಪಿಎಂಸಿ ಕಾಯ್ದೆ 2017, ಮಾದರಿ ಗುತ್ತಿಗೆ ವ್ಯವಸಾಯ ಕಾಯ್ದೆ 2018 ಗಳನ್ನು ಜಾರಿಗೊಳಿಸಲಾಗಿದೆ. ಕೃಷಿ ಹಾಗೂ ಸಂಬಂಧಿತ ಸಚಿವಾಲಯದ ಪುನರ್ ರಚನೆ, 7.86 ಮಿಲಿಯನ್ ಹೆಕ್ಟೇರ್ಗೆ ನೀರುಣಿಸುವ 99 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಯೋಜನೆ, 151 ಜಿಲ್ಲೆಗಳನ್ನು ಬರಗಾಲದಿಂದ ರಕ್ಷಿಸುವ ಯೋಜನೆ ಹಾಗೂ 2 ಲಕ್ಷ ರೈತರನ್ನು ಒಳಗೊಂಡು 2.5 ಮಿಲಿಯನ್ ಹೆಕ್ಟೇರ್ನಲ್ಲಿ ಸಾವಯವ ಕೃಷಿ, ಪ್ರಧಾನ ಮಂತ್ರಿ ಕಿಸಾನ್ (ಪ್ರಧಾನ ಮಂತ್ರಿ ಕೃಷಿ ಸನ್ಮಾನ್ ನಿಧಿ) ಯೋಜನೆ ಮೂಲಕ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ನೆರವು. 8.52 ಕೋಟಿ ರೈತರಿಗೆ 62,469 ಕೋಟಿ ಸಹಾಯಧನ ಬಿಡುಗಡೆ, ಮೀನುಗಾರಿಕಾ ಉದ್ಯಮಕ್ಕೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆರ್ಥಿಕ ನಿಧಿ ಇನ್ನಿತರೆ ಪ್ರಮುಖ ಯೋಜನೆಗಳು.
ಮೋದಿ ನೇತೃತ್ವದಲ್ಲಿ ಇಂದು ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ದೇಶದ ಆರ್ಥಿಕತೆಯನ್ನು ಇನ್ನಷ್ಟು ಸದೃಢಗೊಳಿಸಲು ಸರಕು ಹಾಗೂ ಸೇವಾ ತೆರಿಗೆಯನ್ನು (ಜಿಎಸ್‍ಟಿ) ಇನ್ನಷ್ಟು ಸರಳಗೊಳಿಸಲು ಕಾಯಲಾಗುತ್ತಿದೆ. ವಾಹನ ತಯಾರಿಕಾ ಕ್ಷೇತ್ರ ಇನ್ನೂ ಮೇಕ್ ಇನ್ ಇಂಡಿಯಾ ಉತ್ಪನ್ನಗಳಿಗೆ ಕಾಯುತ್ತಿದೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು 2020ರ ಬಜೆಟ್‍ನಲ್ಲಿ ಮೇಕ್ ಇನ್ ಇಂಡಿಯಾ ಕಲ್ಪನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಭಾರತ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಮುಖ್ಯವಾಗಿ ಆಮದು ಮೇಲೆ ಹೆಚ್ಚುವರಿ ಆಮದು ಸುಂಕ, ವೈಯಕ್ತಿಕ ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾವಣೆ, ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಗೆ ಹಲವು ವಿನಾಯತಿ ಇತ್ಯಾದಿಗಳು ಸೇರಿವೆ.
ಮೇಕ್ ಇನ್ ಇಂಡಿಯಾವನ್ನು ಯಶಸ್ವಿಗೊಳಿಸಲು ಜಿಎಸ್‍ಟಿ ಜಾರಿಗೊಳಿಸಲಾಗಿದೆ. ಆ ಮೂಲಕ ತೆರಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ಹಾಗೂ ಉತ್ತರದಾಯಿತ್ವದ ನಿರೀಕ್ಷೆ ಮಾಡಲಾಗುತ್ತಿದೆ. ಮೇಕ್ ಇನ್ ಇಂಡಿಯಾದ ಭಾಗವಾಗಿರುವ ಡಿಜಿಟಲ್ ಇಂಡಿಯಾ ಯೋಜನೆ, ಈ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸುಲಲಿತ ಮತ್ತು ಪಾರದರ್ಶಕಗೊಳಿಸಿದೆ. ಇದು ಜಿಎಸ್‍ಟಿ ಜಾರಿಗೆ ನೆರವಾಗುತ್ತಿದೆ. ಕೆಲವು ಕ್ಷೇತ್ರಗಳ ಮೇಲಿನ ಆಮದು ತೆರಿಗೆ ಹೆಚ್ಚಳ ಮಾಡುವ ಮೂಲಕ ಮೇಕ್ ಇನ್ ಇಂಡಿಯಾ ಕಲ್ಪನೆಯನ್ನು ಯಶಸ್ವಿಗೊಳಿಸಲು ಶ್ರಮಿಸಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಮೂಲಕ ಭಾರತವನ್ನು ವಿಶ್ವದ ಅತಿ ದೊಡ್ಡ ಉತ್ಪಾದನಾ ವಲಯವಾಗಿಸಲು ಸರ್ಕಾರ ನಿರ್ಧರಿಸಿದೆ. 2020 ರ ಮೇ 20ರಂದು ಭಾರತೀಯ ರೈಲ್ವೆ ತನ್ನ ಫ್ರೆಂಚ್ ಸಹಭಾಗಿತ್ವ ಸಂಸ್ಥೆ ಅಲ್‍ಸ್ಟಾಮ್ ಮೂಲಕ ಸ್ಥಳೀಯವಾಗಿ ಉತ್ಪಾದಿಸಿದ 12,000 ಅಶ್ವ ಶಕ್ತಿಯ ಎಲೆಕ್ಟ್ರಿಕ್ ಲೋಕೋವನ್ನು ಲೋಕಾರ್ಪಣೆಗೊಳಿಸಿತು.
2020ರ ಮೇ ನಲ್ಲಿ ಭಾರತ ಸರ್ಕಾರ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಇನ್ನಷ್ಟು ಸೌಲಭ್ಯ ಘೋಷಿಸಿತು. ಈ ಮೂಲಕ ದೇಶದ ಒಟ್ಟು ಆಂತರಿಕ ಉತ್ಪಾದನಾ ಕ್ಷೇತ್ರಕ್ಕೆ ಇವುಗಳ ಕೊಡುಗೆಯನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. ಕೋವಿಡ್ -19 ರ ಕಾರಣಕ್ಕಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಆರ್ಥಿಕ ಬೆಂಬಲವನ್ನು ಈಗಾಗಲೇ ದೊಡ್ಡ ಮಟ್ಟದಲ್ಲಿ ಘೋಷಿಸಲಾಗಿದೆ. ಮುದ್ರಾ ಹಾಗೂ ಪಿಎಂಇಜಿಪಿ ಘಟಕಗಳಿಗೆ ಎರಡನೇ ಹಂತದ ಹಣಕಾಸು ನೆರವಿನ ವ್ಯವಸ್ಥೆಯನ್ನು ಎಂಎಎಂಇ ಸಚಿವಾಲಯ ಘೋಷಿಸಿದೆ. ಫೆಬ್ರವರಿ1, 2020ಕ್ಕೆ ಅನ್ವಯವಾಗುವಂತೆ ಕೈಗಾರಿಕಾ ಹಾಗೂ ಆಂತರಿಕ ವ್ಯಾಪಾರ ಸಚಿವಾಲಯ (ಡಿಪಿಐಐಟಿ) 27,916 ನವೋದ್ಯಮಗಳನ್ನು ಗುರುತಿಸಿದೆ. ಸರ್ಕಾರ 10 ಸಾವಿರ ಕೋಟಿ ರೂಪಾಯಿಗಳ ಫಂಡ್ ಮೂಲಕ ನವೋದ್ಯಮಗಳಿಗೆ ನೆರವು ನೀಡುತ್ತಿದೆ. ಎಸ್‍ಐಡಿಬಿಐ ಈ ಫಂಡ್ ಅನ್ನು ನಿರ್ವಹಿಸುತ್ತಿದೆ. ಈ ಫಂಡ್‍ನ ಶೇ. 10 ರಷ್ಟು ಮಹಿಳಾ ನವೋದ್ಯಮಗಳಿಗೆ ಮೀಸಲಿಡಲಾಗಿದೆ. ಪ್ರವಾಸೋದ್ಯಮ ಸಚಿವಾಲಯ, ದೇಶದ 12 ವಲಯಗಳ 17 ಪ್ರವಾಸಿ ತಾಣಗಳನ್ನು ಅಭಿವೃದ್ಧಿಗಾಗಿ ಗುರುತಿಸಿದೆ.
ಮೂಲ ಸೌಕರ್ಯ ಕ್ಷೇತ್ರದಲ್ಲಿ ಕೂಡಾ ಕೇಂದ್ರ ಸರ್ಕಾರ ಭಾರೀ ಬದಲಾವಣೆಗಳನ್ನು ತರುತ್ತಿದೆ. ಜಲ್ ಜೀವನ್ ಮಿಶನ್‍ನಡಿ ಡಿಸೆಂಬರ್ 25ರಂದು ಕೇಂದ್ರ ಸರ್ಕಾರ ಎಲ್ಲಾ ಮನೆಗಳಿಗೂ ಕುಡಿಯುವ ನೀರು ಪೂರೈಕೆಗೆ 3.5 ಲಕ್ಷ ಕೋಟಿ ವ್ಯಯಿಸುವ ನಿರ್ಧಾರ ಘೋಷಿಸಿತು. ಮುಂದಿನ ಐದು ವರ್ಷಗಳಲ್ಲಿ ಮೂಲ ಸೌಕರ್ಯ ಕ್ಷೇತ್ರದಲ್ಲಿ 1.4 ಟ್ರಿಲಿಯನ್ ಡಾಲರ್ ಮೊತ್ತವನ್ನು ಹೂಡಿಕೆ ಮಾಡಲಾಗುವುದು ಎಂದು ಕೇಂದ್ರ ಉಕ್ಕು ಸಚಿವರು ತಿಳಿಸಿದ್ದಾರೆ. ಕೇಂದ್ರ ಸರಕಾರ ನ್ಯಾಷನಲ್ ಇನ್ಫ್ರಾಸ್ಟಕ್ಟರ್ ಪೈಪ್‍ಲೈನ್ (ಎನ್‍ಐಪಿ) ಮೂಲಕ ದೇಶದ ಎಲ್ಲಾ ಕೇತ್ರಗಳದ ಬಗ್ಗೆ ಅಧ್ಯಯನ ನಡೆಸಿದ್ದು, 2025 ಒಳಗೆ, 102 ಲಕ್ಷ ಕೋಟಿ ರೂಪಾಯಿಗಳ ಮೂಲ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಿದೆ.