ಬಂಡಿ(ರಾಜಸ್ಥಾನ):ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಬಗ್ಗೆ ವಿವಾದಾತ್ಮಕ ವಿಡಿಯೋ ಮಾಡಿದ ಆರೋಪದಲ್ಲಿ ಬಂಧನವಾಗಿದ್ದ ಬಾಲಿವುಡ್ ನಟಿ ಹಾಗೂ ಬಿಗ್ಬಾಸ್ ಸ್ಪರ್ಧಿ ಪಾಯಲ್ ರೋಹಟಗಿಯನ್ನ 8 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಅಲ್ಲಿನ ಸ್ಥಳೀಯ ಕೋರ್ಟ್ ಆದೇಶ ಹೊರಡಿಸಿದೆ.
ವಿವಾದಿತ ಟ್ವೀಟ್: ಮಾಡೆಲ್, ನಟಿ ಪಾಯಲ್ ರೋಹಟಗಿ 8 ದಿನ ನ್ಯಾಯಾಂಗ ಬಂಧನಕ್ಕೆ! - ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಬಗ್ಗೆ ವಿವಾದಾತ್ಮಕ ವಿಡಿಯೋ
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ವಿರುದ್ಧ ವಿವಾದಿತ ಟ್ವೀಟ್ ಮಾಡಿದ್ದ ಆರೋಪದ ಮೇಲೆ ಬಂಧನವಾಗಿದ್ದ ನಟಿಯನ್ನ 8 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ.

ಮಾಡೆಲ್, ನಟಿ ಪಾಯಲ್ ರೋಹಟಗಿ
ವಿವಾದಿತ ಟ್ವೀಟ್ ಮಾಡುತ್ತಿದ್ದಂತೆ ಅಕ್ಟೋಬರ್ 10ರಂದು ರಾಜಸ್ಥಾನ ಪೊಲೀಸರು ಬಾಲಿವುಡ್ ನಟಿಯನ್ನ ವಶಕ್ಕೆ ಪಡೆದುಕೊಂಡಿದ್ದರು. ಇದಾದ ಬಳಿಕ ಆಕೆ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠೆ ಎಸ್.ಪಿ.ಮಮತಾ ಗುಪ್ತಾ ಮಾಹಿತಿ ನೀಡಿದ್ದರು.
ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ಇನ್ನಿತರೆ ಗಾಂಧಿ ಹಾಗೂ ನೆಹರು ಕುಟುಂಬದವರ ವಿರುದ್ಧ ಪೋಸ್ಟ್ ಮಾಡಿದ್ದ ಪಾಯಲ್ ವಿರುದ್ಧ ಬಂಡಿ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.